Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:20 PM

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

 

ಬೇಲೂರು: ವಿಶ್ವ ಪ್ರಸಿದ್ಧ ಬೇಲೂರು ಹಾಗೂ ಹಳೇಬೀಡು ದೇವಸ್ಥಾನಗಳನ್ನು ಯುನೆಸ್ಕೋ ತಂಡ ಮಂಗಳವಾರ ಭೇಟಿ ಮಾಡಿತು. ಬೇಲೂರು ಹಾಗೂ ಹಳೇಬೀಡುಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವ ಬಗ್ಗೆ ತೀರ್ಮಾನಿಸಲು ತಂಡ ಭೇಟಿ ಕೊಟ್ಟಿದೆ.

 

ಯುನೆಸ್ಕೋ ಸಂಸ್ಕೃತಿ ವಿಶೇಷ ತಜ್ಞ ಮೊ ಚಿಬಾ, ಜಪಾನಿನ ವಾಸ್ತುಶಿಲ್ಪಿ ಯೂಷಿ ಕವಾಗುಚಿ, ಹಾವಾರ್ಡ್‌ನ ವಾಸ್ತುಶಿಲ್ಪಿ ಜ್ಯೋತಿ ಹೊಸ ಅಗ್ರಹಾರ ಅವರನ್ನು ತಂಡ ಒಳಗೊಂಡಿದೆ. ಪ್ರವಾಸ ಅಭಿವೃದ್ಧಿ ಇಲಾಖೆಯ ಆಯುಕ್ತ ಜಿ. ಕುಮಾರ ನಾಯಕ್ ಅವರನ್ನು ಭೇಟಿ ಮಾಡಿದ ತಂಡ, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಹಾಗೂ ಊರಿನ ಸಮಗ್ರ ಮೂಲಭೂತ ಸೌಕರ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿತು.

 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ನಾಯಕ್ `ಬೇಲೂರು, ಹಳೇಬೀಡು ದೇವಸ್ಥಾನಗಳೂ ಸೇರಿದಂತೆ ಹಾಸನ ಜಿಲ್ಲೆಯಲ್ಲಿನ ೪೦ ಆಲಯಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದಾಗಿ ಯುನೆಸ್ಕೋ ತಂಡ ಭರವಸೆ ನೀಡಿದೆ' ಎಂದಿದ್ದಾರೆ.

 

ಜಿಲ್ಲೆಯ ಆರ್ಥಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟಿಕೊಂಡು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು. ಜಿಲ್ಲೆಗೆ ಬರುವ ಪ್ರವಾಸಿಗರು ಇಲ್ಲೇ ಎರಡು ಮೂರು ದಿನ ತಂಗುವ ಹಾಗೆ ನೋಡಿಕೊಳ್ಳಲಾಗುವುದು ಎಂದು ನಾಯಕ್ ಹೇಳಿದ್ದಾರೆ.

 

ಯುನೆಸ್ಕೋ ತಂಡ ನಂತರ ಸಚಿವ ರೇವಣ್ಣ ಅವರನ್ನು ಭೇಟಿ ಮಾಡಿದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿರುವುದಾಗಿ ಹೆಚ್. ಡಿ. ರೇವಣ್ಣ ತಿಳಿಸಿದರು.

 

ಇನ್ನಷ್ಟು

ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ

ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ

ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ

೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

ಪೈರಸಿ ತಡೆಯಲು ಗುಂಡಾ ಕಾಯ್ದೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com