|
ಸುವರ್ಣ ಕರ್ನಾಟಕಕ್ಕಾಗಿ ಹೊಸ ಅಂಚೆ ಚೀಟಿ
ಬೆಂಗಳೂರು: ಸುವರ್ಣ ಕರ್ನಾಟಕ
ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಸರ್ಕಾರವು ೫ ರೂ
ಮೌಲ್ಯದ ಹೊಸ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದೆ. ಶನಿವಾರ
ನಡೆದ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ನಿರ್ಣಯ
ಕೈಗೊಳ್ಳಲಾಗಿದೆ. `ಕೇಂದ್ರ ಸರ್ಕಾರವು ಈಗಾಗಲೇ ಇದಕ್ಕೆ ಒಪ್ಪಿಗೆ
ನೀಡಿದೆ. ಕೆಲವು ಮಾದರಿ ಚೀಟಿಗಳನ್ನು ಕೇಂದ್ರದ ಆಯ್ಕೆಗೆ
ಕಳುಹಿಸಲಾಗಿದೆ.
ಸಂಪುಟದ ಉಪ ಸಮಿತಿ ತೆಗೆದುಕೊಂಡ ಇತರ ನಿರ್ಣಯಗಳು
ಚಿನ್ನಸ್ವಾಮಿ
ಕ್ರೀಡಾಂಗಣದಲ್ಲಿ `ಸುವರ್ಣಕರ್ನಾಟಕ' ಕಾರ್ಯಕ್ರಮ ನಡೆಯಲಿದೆ.
ಸುಮಾರು ೩,೦೦೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಐಎಎಫ್‌ತಂಡದಿಂದ ವೈಮಾನಿಕ ಪ್ರದರ್ಶನವಿರುತ್ತದೆ.
ಜನವರಿ
೧೫ ಮತ್ತು ೨೬ ರಂದು ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ
ನಡೆಯಲಿದೆ. ೧೦ ಲಕ್ಷ ರೂ. ಒಳಗೊಂಡಿರುವ ಪ್ರತಿಷ್ಠಿತ `ರಾಷ್ಟ್ರಕವಿ'
ಪ್ರಶಸ್ತಿ ಪ್ರದಾನ ಸಮಾರಂಭ
ಮೈಸೂರು ಅನಂತ ಸ್ವಾಮಿ ಸಂಗೀತ ಸಂಯೋಜನೆ ಮಾಡಿರುವ
ನಾಡಗೀತೆಯನ್ನು ಸರ್ಕಾರಕ್ಕೆ ಒಪ್ಪಿಸುವುದು.
ನಾಡಿನ
ಪ್ರಮುಖ ಸಾಹಿತಿಗಳ ೧೦೬ ಪುಸ್ತಕಗಳನ್ನು ಮುದ್ರಿಸಿ ನ.೧ ರಂದು
ಬಿಡುಗಡೆ.
ಬೆಂಗಳೂರು, ಧಾರವಾಡ, ಉಡುಪಿ, ಶಿವಮೊಗ್ಗ, ಮಡಿಕೇರಿ,
ಬೆಳಗಾವಿಗಳಲ್ಲಿ ಸುವರ್ಣ ಸಮುಚ್ಛಯ ನಿರ್ಮಾಣ.
ಇದೇ ಸಂದರ್ಭದಲ್ಲಿ ಹಂಸಲೇಖರ ಸಾಹಿತ್ಯ ಮತ್ತು ಸಂಗೀತವಿರುವ
`ಸುವರ್ಣ ದಿಬ್ಬಣ' ಸಿಡಿಯನ್ನು ಬಿಡುಗಡೆ ಮಾಡಲಾಗುವುದು.
ಮಕ್ಕಳು ಕಲಿತು ಹಾಡಲು ಸುಲಭವಾಗುವ ೨೦ ಹಾಡುಗಳನ್ನು
ಹೊಂದಿದ ಈ ಸಿಡಿಯನ್ನು ಶಾಲಾ ಕಾಲೇಜುಗಳಿಗೆ ಹಂಚಲಾಗುವುದು
ಎಂದು ಗೃಹ ಸಚಿವ ಎಂ.ಪಿ. ಪ್ರಕಾಶ್ ಸಮಿತಿಯ ಸಭೆಯ ನಂತರ
ಸುದ್ದಿಗಾರರಿಗೆ ಹೇಳಿದರು.
ಇನ್ನಷ್ಟು
ಬಗೆ ಹರಿದ ಭಾಷಾ ಕಲಿಕಾ
ವಿವಾದ
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
|