Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 07 October 2006 05:10 PM

ಬಡವರಿಗೆ ಟಿವಿ ವಿತರಿಸಲು ಜಾಗತಿಕ ಟೆಂಡರ್


   ಚೆನೈ: ಕಡುಬಡವರಿಗೆ ಬಣ್ಣದ ಟಿವಿಯನ್ನು ವಿತರಣೆ ಮಾಡುವ ತಮಿಳುನಾಡು ಸರ್ಕಾರದ ಯೋಜನೆಯ ಮೊದಲ ಹಂತ ಮುಗಿದಿದ್ದು, ಎರಡನೇ ಹಂತದ ಟಿವಿ ವಿತರಣೆಗೆ ಜಾಗತಿಕ ಟೆಂಡರ್ ಕರೆಯಲಾಗಿದೆ.


   ಈ ಯೋಜನೆಯ ಎರಡನೆಯ ಹಂತದಲ್ಲಿ ಸುಮಾರು ೨.೫ ದಶಲಕ್ಷ ಬಣ್ಣದ ಟಿವಿಯನ್ನು ವಿತರಣೆ ಮಾಡಲಾಗುತ್ತದೆ. ಡಿಎಂಕೆ ನೇತೃತ್ವದ ಸರ್ಕಾರದ ಈ ಯೋಜನೆ ಕಳೆದ ತಿಂಗಳಿನಿಂದ ಜಾರಿಯಲ್ಲಿದೆ. ಮೊದಲಹಂತದ ವಿತರಣಾ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ೧೫ ಮತ್ತು ೧೬ ರಂದು ೧೪ ಇಂಚಿನ ಸುಮಾರು ೩೦ ಸಾವಿರ ಬಣ್ಣದ ಟಿವಿಯನ್ನು ಕಡುಬಡವರಿಗೆ ವಿತರಿಸಲಾಯಿತು.


   ಟೆಂಡರ್‌ನ ಪೂರ್ತಿ ಜವಾಬ್ದಾರಿಯನ್ನು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ತಮಿಳುನಾಡು (ಎಲ್ಕಾಟ್) ಸಂಸ್ಥೆಗೆ ನೀಡಲಾಗಿದ್ದು. ಟೆಂಡರ್ ಅಕ್ಟೋಬರ್ ೨೦ರ ತನಕ ಮುಕ್ತವಾಗಿರುತ್ತದೆ.
ಟೆಂಡರ್‌ಗೆ ಬಿಡ್ ಮಾಡುವ ಸಂಸ್ಥೆ ಬಣ್ಣದ ಟಿವಿ ತಯಾರಕ ಘಟಕವನ್ನು ಹೊಂದಿರಬೇಕು. ವರ್ಷಕ್ಕೆ ಸರಾಸರಿ ೫೦,೦೦೦ದಂತೆ ಟಿವಿ ತಯಾರಿಸುವ ಸಾಮರ್ಥ್ಯ ಹಾಗೂ ಅಷ್ಟೇ ಸಂಖ್ಯೆಯ ಟಿವಿಯನ್ನು ಮಾರಾಟ ಮಾಡಿದ ದಾಖಲೆ ಇರಬೇಕು. ಇದರ ಜೊತೆಗೆ ಬಿಡ್ ಮಾಡುವ ಸಂಸ್ಥೆಯು `ಐಎಸ್‌ಓ೯೦೦೦' ಪ್ರಮಾಣ ಪತ್ರ ಹೊಂದಿರಬೇಕು ಎಂದು ಟೆಂಡರ್ ನೋಟಿಸಿನಲ್ಲಿ ಹೇಳಲಾಗಿದೆ.

 

ಇನ್ನಷ್ಟು

ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ

ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ

ಮತಾಂಧರಿಂದ ಹತ್ತಿ ಉರಿಯುತ್ತಿರುವ ಮಂಗಳೂರು

ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ

ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ

ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ

ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ

ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ ಕಾರ್ಯಕ್ರಮ

ಶಿಕ್ಷಣ ಇಲಾಖೆಗೂ ಇ-ಆಡಳಿತ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com