|
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಬೆಂಗಳೂರು: ತನ್ನ ಉತ್ಪನ್ನದ ಜನಪ್ರಿಯತೆಯನ್ನು ಹೆಚ್ಚಿಸಲು
ಒಂದು ವರ್ಷದಿಂದೀಚೆಗೆ ಎಂಟಿಆರ್ ಆಹಾರೋತ್ಪಾದನಾ ಸಂಸ್ಥೆ ಜಾದೂ
ಪ್ರದರ್ಶನಗಳನ್ನು ಪ್ರಾಯೋಜಿಸುತ್ತಿದೆ. ಜಾದೂ ಪ್ರದರ್ಶನವು
ಸಂಸ್ಥೆಗೆ ಉತ್ತಮ ಹೆಸರನ್ನು ತಂದು ಕೊಟ್ಟಿದೆ.
ಉದಯ್ ಜಾದೂಗಾರ್ ಅಂಥ ಉತ್ತಮ ಜಾದೂ ಕಲಾವಿದರ ಜಾದೂ
ಪ್ರದರ್ಶನವನ್ನು ಏರ್ಪಡಿಸಿ ಆಗಮಿಸಿದ ವೀಕ್ಷಕರಿಗೆ ಉಚಿತವಾಗಿ ಎಂಟಿಆರ್
ಉತ್ಪನ್ನಗಳನ್ನು ಹಂಚುತ್ತಿತ್ತು. ಈ ವರೆಗೆ ೫೦ ಪ್ರದರ್ಶನಗಳನ್ನು
ಏರ್ಪಡಿಸಿದ್ದು ಇನ್ನೂ ೨೦೦ ಪ್ರದರ್ಶನಗಳನ್ನು ಎಂಟಿಆರ್‌ನ
ಮಾರುಕಟ್ಟೆ ದುರ್ಬಲವಾಗಿರುವ ಉತ್ತರ ಕರ್ನಾಟಕದಲ್ಲಿ ಏರ್ಪಡಿಸುವ
ಯೋಜನೆಯನ್ನು ಎಂಟಿಆರ್ ಸಂಸ್ಥೆ ಹಮ್ಮಿಕೊಂಡಿದೆ.
ಇಷ್ಟೆ ಅಲ್ಲದೆ ದೊಡ್ಡ-ದೊಡ್ಡ ವಸತಿ ಸಂಕೀರ್ಣಗಳಲ್ಲಿ ತನ್ನ ಉತ್ಪನ್ನಗಳ
ಪ್ರಚಾರ ಕೈಗೊಂಡಿತ್ತು. ಈ ರೀತಿಯ ಪ್ರಚಾರದಿಂದ ಶೇ. ೩೫ರಷ್ಟು
ಮಾರಾಟ ಪ್ರಗತಿ ಹೆಚ್ಚಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇನ್ನಷ್ಟು
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ
ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ಶಿಕ್ಷಣ ಇಲಾಖೆಗೂ ಇ-ಆಡಳಿತ
|