|
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ನವದೆಹಲಿ: ಬ್ರಿಟನ್ ದೇಶದ ಗ್ರಾಹಕರ ವಿವರಗಳು ಭಾರತದ ಬಿಪಿಓ
ಕೇಂದ್ರಗಳಿಂದ ಕಳ್ಳತನವಾಗುತ್ತಿರುವ ಸುದ್ದಿಯ ಹಿನ್ನೆಲೆಯಲ್ಲಿ
ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರವು ೨೦೦೦ರಲ್ಲಿ ರಚಿಸಿದ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಅಲ್ಪ
ಸ್ವಲ್ಪ ಬದಲಾವಣೆ ಮಾಡಿದೆ. ಈ ನಿಯಮಾವಳಿಯ ಪ್ರಕಾರ
ಮಾಹಿತಿಯ ರಕ್ಷಣೆಯ ಜವಾಬ್ದಾರಿಯನ್ನು ಕಂಪೆನಿಗಳೇ
ವಹಿಸಿಕೊಳ್ಳಬೇಕಾಗುತ್ತದೆ. ಹೊರಗುತ್ತಿಗೆ ಕಂಪೆನಿಗಳು ಹಾಗೂ
ಇತರ ಐಟಿ ಕಂಪೆನಿಗಳಿಗೆ ಈ ನಿಯಮಗಳು ಅನ್ವಯಿಸುತ್ತದೆ.
ನಿಯಮ ಮುರಿದ ಕಂಪೆನಿ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಲು
ಆವಕಾಶವಿದೆ.
ಈ ಎಲ್ಲಾ ತಿದ್ದುಪಡಿಯನ್ನು ಒಳಗೊಂಡ ಕಾಯಿದೆಯನ್ನು ಸಂಸತ್ತಿನ ಮುಂದಿನ
ಚಳಿಗಾಲದ ಅಧಿವೇಶನದಲ್ಲಿ
ಮಂಡಿಸಲಾಗುವುದು. ಮಾಹಿತಿ ಕಳುವು ಹಾಗೂ ಸೋರಿಕೆ
ಮಾಡಿದವರಿಗೆ ೨ ವರ್ಷ ಶಿಕ್ಷೆ ಹಾಗೂ ೫ ಲಕ್ಷ ರೂ. ದಂಡ ಅಥವಾ
ಎರಡನ್ನೂ ವಿಧಿಸಬಹುದಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇನ್ನಷ್ಟು
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ
ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ಶಿಕ್ಷಣ ಇಲಾಖೆಗೂ ಇ-ಆಡಳಿತ
|