ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ
ಶಿವರಾಜ್‌ಸಿಂಗ್ ಚೌಹಾನ್ ಅವರಿಂದ ತೆರವಾದ ವಿದಿಶಾ ಲೋಕಸಭಾ ಕ್ಷೇತ್ರದಿಂದ
ಸ್ಪರ್ಧಿಸಲು ಆಶಿಸಿದ್ದ ವರುಣ್ ಗಾಂಧಿಗೆ ಟಿಕೇಟ್ ನೀಡದಿರಲು ಬಿಜೆಪಿ
ನಿರ್ಧರಿಸಿದೆ.
ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ರಾಂಪಾಲ್
ಸಿಂಗ್‌ಗೆ ಎಲ್. ಕೆ. ಅಡ್ವಾಣಿಯನ್ನೊಳಗೊಂಡ ಚುನಾವಣಾ ಸಮಿತಿ ಅವಕಾಶವನ್ನಿತ್ತಿದೆ.
ಮೇನಕಾ ಗಾಂಧಿಯ ಪುತ್ರ ವರುಣ್ ಗಾಂಧಿಯವರನ್ನು
ಕಣಕ್ಕಿಳಿಸಲು ವಾಜಪೇಯಿ, ಅಡ್ವಾಣಿಗೆ ಇಷ್ಟವಿದ್ದರೂ ಬಿಜೆಪಿ ರಾಜ್ಯ ಘಟಕ ಮತ್ತು
ಆರೆಸ್ಸೆಸ್ ತೀವ್ರ ವಿರೋಧ ಮಾಡಿದ್ದರಿಂದ ರಾಂಪಾಲ್‌ರನ್ನು ಚುನಾವಣೆಗೆ
ನಿಲ್ಲಿಸಲಾಗಿದೆ.