ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಸ್ಯಾನ್ ಫ್ರಾನ್ಸಿಸ್ಕೋ: ಟೈಮ್ ವಾರ್ನರ್ ಸಂಸ್ಥೆಗೆ
ಸೇರಿದ ಎಓಎಲ್ ಸಂಸ್ಥೆ `ಓಪನ್‌ರೈಡ್' ಎಂಬ ಹೊಸ ಬ್ರೌಸರ್ ತಂತ್ರಾಂಶವನ್ನು
ಬಿಡುಗಡೆ ಮಾಡಿದೆ.
`ಓಪನ್‌ರೈಡ್' ತಂತ್ರಾಂಶದ ಮೂಲಕ ಒಂದೇ ಬಾರಿಗೆ
ನೀವು ಎಓಎಲ್‌ನ ೪ ಬೇರೆ ಬೇರೆ ಸೇವೆಗಳನ್ನು ಉಪಯೋಗಿಸಬಹುದು.
ಈ ತಂತ್ರಾಂಶದಿಂದ ಒಮ್ಮೆಗೆ ಈ ಮೇಲ್, ಮೇಸ್ಸೆಂಜಿಗ್, ವೀಡಿಯೋ ಚಿತ್ರ
ವೀಕ್ಷಣೆ ಹಾಗೂ ಸಂಗೀತ ಆಲಿಸಬಹುದು. ಯಾವುದೇ ಹೆಚ್ಚಿನ ಅನ್ವಯ
ತಂತ್ರಾಂಶದ ಅವಶ್ಯಕತೆಯಿಲ್ಲದೆ ಈ ತಂತ್ರಾಂಶವು ಕಾರ್ಯ ನಿರ್ವಹಿಸುತ್ತದೆ.
`ಓಪನ್‌ರೈಡ್' ತಂತ್ರಾಶ ಮುಕ್ತವಾಗಿ ಲಭ್ಯವಾಗುತ್ತಿದೆ ಎಂದು
ಎಓಎಲ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.