ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ನವದೆಹಲಿ: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ
ಆರ್ಥಿಕ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಅನುಗುಣವಾಗಿ ತನ್ನ
೨೦ ಅಂಶಗಳ ಕಾರ್ಯಕ್ರಮಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳನ್ನು
ಮಾಡುತ್ತಿದೆ.
ಪುನರ್ ರೂಪಿಸಿದ ೨೦ ಅಂಶಗಳು ಹೀಗಿವೆ:
-
ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ
ಗುರಿ ಹೊಂದಿರುವ `ಗರೀಬಿ ಹಟಾವೊ' ಕಾರ್ಯಕ್ರಮ.
-
೬,೫೦೦ ಕಿ. ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ
ಮಾರ್ಪಡಿಸಲು ೪೧,೨೧೦ ಕೋಟಿ. ರೂ ಯೋಜನೆ.
-
ಇಸ್ಟರ್ನ್ ಕೋಲ್ ಫೀಲ್ಡ್‌ನ ಪುರ್ನವಸತಿ ಕಾರ್ಯಕ್ರಮ...ಇತ್ಯಾದಿ
ಈ ವಿಚಾರವನ್ನು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಿಯರಂಜನ್
ದಾಸ್ ಮುನ್ಷಿ ತಿಳಿಸಿದರು.