ಪಾಕ್ ಸಂಸತ್ತಿನ ಮೇಲೆ ರಾಕೆಟ್ ದಾಳಿ
ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಪರ್ವೆಜ್
ಮುಷರಫ್ ನಿವಾಸದ ಬಳಿಯ ಸ್ಫೋಟದ ನಂತರ ಎರಡು
ರಾಕೆಟ್‌ಗಳು ಪಾಕಿಸ್ತಾನದ ಸಂಸತ್ತಿನ ಬಳಿ ಪತ್ತೆಯಾಗಿದೆ.
ರಾಕೆಟ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ
ಎಂದು ಪೊಲೀಸರು ಹೇಳಿದ್ದಾರೆ.
ರಾಕೆಟ್ ಸಿಕ್ಕ ಸ್ಥಳದಿಂದ ಅನತಿ ದೂರದಲ್ಲಿ
ಇರುವ ಸಮ್ಮೇಳನ ಭವನದಲ್ಲಿ ಮುಷರಫ್ ಅವರ ಭಾಷಣಕ್ಕಾಗಿ
ನಿಯೋಜಿಸಲಾಗಿತ್ತು. ಬುಧವಾರ ಮುಷರಫ್ ನಿವಾಸದ ಬಳಿ ಬಾಂಬ್ ಸ್ಫೋಟದ
ನಂತರವೂ ಪೊಲೀಸರು ಎಚ್ಚೆತ್ತುಕೊಳ್ಳಲಿಲ್ಲ ಎಂದು ಪಾಕಿಸ್ತಾನದ
ಮಾಧ್ಯಮಗಳು ಹೇಳಿವೆ.
ಸಂಸತ್ತಿನ ಬಳಿ ಕೆಲಸದಲ್ಲಿ ನಿರತರಾಗಿದ್ದ ಸುಮಾರು
೮೦ ಜನರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.