ಶಿಕ್ಷಣ ಇಲಾಖೆಗೂ ಇ-ಆಡಳಿತ
ಬೆಂಗಳೂರು: ರಾಜ್ಯದಲ್ಲಿ ಈಗ ಎಲ್ಲೆಡೆ ಇ-
ಸರ್ಕಾರದ ಕಾರುಬಾರು. ಇದಕ್ಕೀಗ ರಾಜ್ಯ ಶಿಕ್ಷಣ ಇಲಾಖೆಯೂ ಹೊರತಾಗಿಲ್ಲ.
ಶಿಕ್ಷಣ ಇಲಾಖೆಯು ನೂತನ ತಂತ್ರಜ್ಞಾನದ ಇ-ಆಡಳಿತವನ್ನು
ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಈಗಾಗಲೇ ಬೆಂಗಳೂರು, ಗುಲ್ಬರ್ಗಾ,
ಬೆಳಗಾವಿಯ ಶಿಕ್ಷಣ ಇಲಾಖೆಗಳಲ್ಲಿ ಟಚ್ ಸ್ಕ್ರೀನ್ ಕಿಯೊಸ್ಕ್‌ಗಳನ್ನು
ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕರು ಶಿಕ್ಷಕರ ವರ್ಗಾವಣೆ, ಬಡ್ತಿ,
ಶಾಲೆಗಳಿಗೆ ಅನುದಾನ, ಶಾಲೆಗಳಲ್ಲಿ ಅಳವಡಿಸಿದ ಹೊಸ ಶಿಕ್ಷಣ, ಸಾರ್ವಜನಿಕ
ದೂರುಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಸಾರ್ವಜನಿಕ
ಶಿಕ್ಷಣ ಇಲಾಖೆಯ ಆಯುಕ್ತರಾದ ಎಂ. ಮದನ್ ಗೋಪಾಲ್ ಸುದ್ದಿಗಾರರಿಗೆ
ತಿಳಿಸಿದರು.