ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ಚಿತ್ರದುರ್ಗ: ನಗರದ ಶ್ರೀ ಮುರುಘಾ ಮಠದಲ್ಲಿ
ಶ್ರೀ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಬೆಳಗ್ಗೆ ಬಸವತತ್ವ
ಧ್ವಜಾರೋಹಣ ನಡೆಸುವ ಮೂಲಕ ಶರಣ ಸಂಸ್ಕೃತಿ ಉತ್ಸವಕ್ಕೆ ವಿಧ್ಯುಕ್ತವಾಗಿ
ಚಾಲನೆ ನೀಡಿದರು.
ಶರಣ ಸಂಸ್ಕೃತಿಯ ಉತ್ಸವವನ್ನು ಮಠದ
ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಇಲ್ಲಿನ ಶಿವಯೋಗಿ ಸಿದ್ಧರಾಮ ವೇದಿಕೆಯಲ್ಲಿ ನಡೆದ
ಸಹಜ ಶಿವ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ
ಶಿವಮೂರ್ತಿ ಶಿವ ಶರಣರು, ಉತ್ತಮ ಆಲೋಚನೆ ಮತ್ತು ಚಿಂತನೆ ಹೊಂದಿರುವವರು
ಆರೋಗ್ಯವಂತರಾಗಿರುತ್ತಾರೆ. ಆಸೆ ಮನುಷ್ಯನನ್ನು ದಾಸ್ಯಕ್ಕೆ ಮತ್ತು
ಗುಲಾಮತನಕ್ಕೆ ತಳ್ಳುತ್ತವೆ ಎಂದರು.