ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು
ಅಹಮದಾಬಾದ್: ಸಾಮಾಜಿಕ ಹಾಗೂ
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. ೨೭ರಷ್ಟು ಮೀಸಲಾತಿ ನೀಡುವುದಾಗಿ
ಅಹಮದಾಬಾದಿನ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್
ನಿರ್ಧರಿಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಹಂತ
ಹಂತವಾಗಿ ಜಾರಿಗೆ ಬರಲಿದೆ ಎಂದು ಐಐಎಂ-ಎ ನ ನಿರ್ದೇಶಕ ಬಕುಲ್
ದೊಲಕೀಯ ಹೇಳಿದ್ದಾರೆ. ಎನ್. ಆರ್. ನಾರಾಯಣ ಮೂರ್ತಿ ಅವರ ನೇತೃತ್ವದ
ಪೀಠ ಈ ನಿರ್ಧಾರ ಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಈ ನಿರ್ಧಾರ
ಕೈಗೊಂಡ ವಿದ್ಯಾಸಂಸ್ಥೆ ಐಐಎಂ-ಎ ಆಗಲಿದೆ.