ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ -
ದೇವೇಗೌಡ
ಶೃಂಗೇರಿ: ದತ್ತ ಪೀಠ ವಿಚಾರದಲ್ಲಿ ನ್ಯಾಯಾಲಯದ
ಆದೇಶ ಪಾಲಿಸುವುದೇ ಅಂತಿಮ ತೀರ್ಮಾನ ಎಂದು ಮಾಜಿ ಪ್ರಧಾನಿ ಹೆಚ್.ಡಿ.
ದೇವೇಗೌಡ ಹೇಳಿದ್ದಾರೆ
ಪುತ್ರ ಬಾಲಕೃಷ್ಣೇಗೌಡ ಅವರೊಂದಿಗೆ ಶುಕ್ರವಾರ
ಶ್ರೀಶಾರದಾ ಪೀಠಕ್ಕೆ ಭೇಟಿ ನೀಡಿದ್ದ ಅವರು ಶರನ್ನವರಾತ್ರಿ ವಿಶೇಷ ಪೂಜೆಯಲ್ಲಿ
ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ
ಜತೆ ಮಾತನಾಡಿದರು.
ದತ್ತ ಪೀಠ ಕುರಿತು ನ್ಯಾಯಾಲಯ ನೀಡಿರುವ
ತೀರ್ಪನ್ನು ಸರಕಾರ ಅಧ್ಯಯನ ಮಾಡುತ್ತಿದೆ. ಈ ವಿಚಾರದಲ್ಲಿ ನ್ಯಾಯಾಲಯದ
ಆದೇಶವೇ ಅಂತಿಮ. ಅದನ್ನು ಸರಕಾರ ಪಾಲಿಸುತ್ತದೆ. ಜತೆಗೆ ನ್ಯಾಯಾಲಯದ
ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.