ದಿನದ ೨೪ ಗಂಟೆ ಕೆಲಸ ನಿರತರಾಗಿರುವ ಈ
ಸಂಸ್ಥೆಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ತುರ್ತು ಸೇವೆಯನ್ನು
ಬೇರೆ ನಗರದಲ್ಲಿರುವ ಕಚೇರಿಯಿಂದ ನಿರ್ವಹಿಸಲಾಗುವುದು. ಬಂದ್
ಇರುವ ದಿನದಂದು ರಜಾ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುರಕ್ಷತೆಯ
ಅದ್ಯತೆಯನ್ನು ಗಮನಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು
ಟ್ರಾನ್ಸ್ ವರ್ಕ್ಸ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ವಿಪ್ರೋ, ಇನ್ಫೋಸಿಸ್, ಐಬಿಯಂ, ಐ-ಫೆಲ್ಕ್ಸ್,
ಅಕ್ಸೆಂಚರ್ ಸಂಸ್ಥೆಗಳು ರಜೆ ನೀದುವ ಬಗ್ಗೆ ಇನ್ನೂ
ನಿರ್ಧರಿಸದಿರುವುದು ಕಂಪೆನಿಯ ನೌಕರರಲ್ಲಿ ಗೊಂದಲ ಮೂಡಿಸಿದೆ.
ವಿದೇಶಿ ಕ್ಲೈಂಟ್ ಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ ಎಂಬುದು
ಬಹುತೇಕ ಕಂಪೆನಿಗಳ ಹೇಳಿಕೆ.