ಮೇಲ್ಮನೆಯಲ್ಲಿ ಮಲಗಿದ ಶಾಸಕರು: ಬರ
ಪರಿಹಾರ ಕಾಮಗಾರಿಯನ್ನು ಆಡಳಿತ ಸರ್ಕಾರ ನಿರ್ಲಕ್ಷಿಸಿದೆ ಎಂದು ವಿಧಾನ
ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕರು ರಾತ್ರಿಯಿಡೀ ಧರಣಿ ನಡೆಸಿದರು.
ಅಲ್ಲಿಯೇ ಬೆಡ್ ಶೀಟ್, ರಗ್ಗು, ಚಾದರಗಳನ್ನು ಹಾಸಿಕೊಂಡು
ಬೆಳಗು ಹರಿಸಿದರು.
ರಾತ್ರಿ ೧.೧೫ ರ ಹೊತ್ತಿಗೆ ವಿಧಾನ ಪರಿಷತ್ತಿನ ಸಭೆಯಲ್ಲಿ
`ಎಚ್. ಕೆ. ಪಾಟೀಲ್‌ರ ರಾಜ್ಯದಲ್ಲಿನ ಬರಗಾಲದಿಂದ ೫ ಲಕ್ಷ ಜನ ಗುಳೆ ಹೋಗಿದ್ದಾರೆ
ಎನ್ನುವ ಮಾತು ಸುಳ್ಳು' ಎಂದು ಶೆಟ್ಟರ್ ಹೇಳಿದ್ದೇ ಕಾಂಗ್ರೆಸಿಗರ
ಸಿಟ್ಟಿಗೆ ಕಾರಣವಾಯಿತು. ಆ ಕ್ಷಣವೇ ಧರಣಿಗೆ ಕುಳಿತ ಸದಸ್ಯರು ಉಪ
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಯಾರಮಾತನ್ನೂ
ಕೇಳದೇ ತಮ್ಮ ಧರಣಿಯನ್ನು ಮುಂದುವರಿಸಿದರು.