|
ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷ ಪ್ರತಿಭಟನೆ
ತುಮಕೂರು: ಸಮ್ಮಿಶ್ರ ಸರ್ಕಾರದ ಸಮಾಜ
ವಿರೋಧಿ ಧೋರಣೆಯನ್ನು ಖಂಡಿಸಿ ಸಮಾಜವಾದಿ ಪಕ್ಷದ ಜಿಲ್ಲಾ
ಕೇಂದ್ರದ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು.
ಸರ್ಕಾರದ ಅಣುಕು ಶವಯಾತ್ರೆ ನಡೆಸಿದ ಸಮಾಜವಾದಿ
ಪಕ್ಷದ ಕಾರ್ಯಕರ್ತರು ನಂತರ ಟೌನ್ ಹಾಲ್ ಬಳಿ ರಸ್ತೆ ತಡೆ
ನಡೆಸಿದರು.
`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಜಾ ವಿರೋಧಿ
ಧೋರಣೆಯನ್ನು ಅನುಸರಿಸುತ್ತಿದೆ. ಇದರ ಪರಿಣಾಮ ಸಾಮಾನ್ಯ ಜನರ ಮೇಲಾಗುತ್ತಿದೆ.
ಬಡಜನರಿಗೆ ಪಡಿತರ ಚೀಟಿ ಹಂಚುವಿಕೆಯಲ್ಲೂ ಸರ್ಕಾರ
ಗೊಂದಲಮಯ ವಾತವರಣ ಸೃಷ್ಟಿಸಿದೆ. ಜನರು ತಮ್ಮ
ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ
ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ರಾಜ್ಯದ ಸಮ್ಮಿಶ್ರ ಸರ್ಕಾರ ಸಮಸ್ಯೆಯನ್ನು
ಬಗೆಹರಿಸುವುದಿರಲಿ ತಾನೇ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ವಿರೋಧ ಪಕ್ಷ ಕೂಡ
ಜನರ ಸಮಸ್ಯೆಯನ್ನು ಸರ್ಕಾರದತ್ತ ಕೊಂಡುಯ್ಯುವಲ್ಲಿ ವಿಫಲವಾಗಿದೆ
ಎಂದು ಕಾರ್ಯಕರ್ತರು ಹೇಳಿದ್ದಾರೆ.
`ತುಮಕೂರಿನ ಚಿಕ್ಕನಾಯಕನಹಳ್ಳಿಯ ಬಳಿ
ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದೆ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯದಿಂದ
ವರ್ತಿಸುತ್ತಿದೆ
ಎಂದು ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಂತಯ್ಯ
ಹೇಳಿದ್ದಾರೆ.
ಸಮಾಜವಾದಿಪಕ್ಷದ ಕಾರ್ಯಕರ್ತರಾದ
ಚೌಧರಿ ವೀರ್ ಸಿಂಗ್, ಕೊಡಿಯಾಲು ಕೃಷ್ಣಮೂರ್ತಿ, ಸುಕುಮಾರ್ ಹಾಗೂ
ತುಮಕೂರು ಘಟಕದ ಅಧ್ಯಕ್ಷ ರಾಮಚಂದ್ರಮೂರ್ತಿ ಧರಣಿಯಲ್ಲಿ
ಭಾಗವಹಿಸಿದ್ದರು.
ಇನ್ನಷ್ಟು
ರೈತರಿಂದ ಅತಿಕ್ರಮಣ ನಡೆದಿಲ್ಲ
ಬೆಳಗಾವಿ ಕಲಾಪ: ರಾಜ್ಯಪಾಲರ ಭಾಷಣ
ಉಗ್ರನ ಗಲ್ಲಿಗೆ ಕಾಶ್ಮೀರದಲ್ಲಿ ವಿರೋಧ
ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ
ತಂಡ
ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ
ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ
ಮೀಸಲಾತಿ ನೀಡಿಕೆಗೆ
ಮೋಯ್ಲಿ ಶಿಫಾರಸು
ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು
ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ
ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ
|