ಬೆಳಗಾವಿ ಕಲಾಪ: ರಾಜ್ಯಪಾಲರ ಭಾಷಣ
ಬೆಳಗಾವಿ: ಗುರುವಾರ ರಾಜ್ಯಪಾಲ ಟಿ. ಎನ್.
ಚತುರ್ವೇದಿ ಜಂಟಿ ಸಭೆಯನ್ನುದ್ದೇಶಿಸಿ ೩೫ ನಿಮಿಷ ಮಾತನಾಡಿದರು.
ಅವರು ತಮ್ಮ ಭಾಷಣದಲ್ಲಿ ಇತ್ತೀಚಿನ ವಿದ್ಯಮಾನ ಮತ್ತು
ರಾಜಕಾರಣಿಗಳು ತಿದ್ದಿಕೊಳ್ಳಬೇಕಾದ ವಿಷಯಗಳ ಬಗ್ಗೆ ಸಲಹೆಯನ್ನಿತ್ತರು.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ
ವಿಷಯಗಳು ಇಂತಿವೆ:
-
ಆಡಳಿತ
ನೋಡಿಕೊಳ್ಳುತ್ತಿರುವ ಸಾರ್ವಜನಿಕ ಪ್ರತಿನಿಧಿಗಳು ಮತ್ತು
ಅಧಿಕಾರಿಗಳು ನ್ಯಾಯಯುತವಾಗಿ, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
-
ಕೆಲವು ಸಮಾಜ
ವಿರೋಧಿ ಶಕ್ತಿಗಳು ಕಾನೂನು ಬಾಹಿರವಾಗಿ ನೈಸರ್ಗಿಕ ಸಂಪತ್ತಿನ
ದುರ್ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ಕಾನೂನು ಇವರನ್ನು ಹಿಡಿಯಲು
ಸಮರ್ಥವಾಗಿಲ್ಲ ಎಂದು ವಿಷಾದಿಸಿದರು.
-
ಹಿಂದಿನ ಸರ್ಕಾರ
ಕೈಗೆತ್ತಿಕೊಂಡಿದ್ದ ಯೋಜನೆಗಳನ್ನು ಆಡಳಿತ ಸರ್ಕಾರ ನಿಲ್ಲಿಸಬಾರದು.
-
ಭಾರತದ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಾರದಂತೆ ನದಿ ನೀರಿನ ವಿವಾದಗಳನ್ನು
ಪರಿಹರಿಸಿಕೊಳ್ಳಿ.
-
ಅರ್ಹರಿಗೆ ಸರ್ಕಾರದ
ಯೋಜನೆಗಳು ತಲುಪುವಂತೆ ಪ್ರತಿನಿಧಿಗಳು ಮತ್ತು
ಅಧಿಕಾರಿಗಳು ಪ್ರಯತ್ನಿಸಬೇಕು.
-
ಕನ್ನಡಕ್ಕೆ
ಶಾಸ್ತ್ರೀಯ ಸ್ಥಾನಮಾನ ನೀಡಬೇಕು.
ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ
ಕರೆಯನ್ನಿತ್ತರು.