ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು
ಬೆಳಗಾವಿ: ಬೆಳಗಾವಿಯ ಐತಿಹಾಸಿಕ ಸದನ
ಪ್ರಾರಂಭವಾಗಿ ಎರಡು ದಿನಗಳು ಕಳೆದರೂ ಪಕ್ಷ-ಪ್ರತಿಪಕ್ಷಗಳು
ಹೆಚ್ಚಿನ ಸಮಯವನ್ನು ಆರೋಪ ಪ್ರತ್ಯಾರೋಪಗಳಲ್ಲೇ
ಕಳೆದವು.
ಬುಧವಾರ ಅಧಿವೇಶನ ಸೇರಿದ ತಕ್ಷಣ
ಜೆಡಿ(ಎಸ್) ಸದಸ್ಯ ಎಂ.ಪಿ. ವೆಂಕಟೇಶ್ ಕಾಂಗ್ರೆಸ್‌ನ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ನೋಟಿನ
ಕಂತೆಯೊಂದಿಗೆ ಕುಳಿತಿರುವ ಫೋಟೊ ಪ್ರದರ್ಶಿಸಿದರು. ಇದು
ಸದನದಲ್ಲಿ ವಾಗ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿತು.
ಮೇಲ್ಮನೆ: ಎಂಟುನೂರು ಕೋಟಿ ರೂ.
ಅರಣ್ಯ ಭೂಮಿಯ ಪರಭಾರೆ ಬಗ್ಗೆ ಸಂಬಂಧಿಸಿದ ಸೀಡಿಯನ್ನು ಮೇಲ್ಮನೆ
ವಿರೋಧ ಪಕ್ಷದ ನಾಯಕ ಎಚ್.ಕೆ. ಪಾಟೀಲ್ ಪ್ರದರ್ಶಿಸಿದರು. ಈ
ಗಲಾಟೆ ಮಧ್ಯಾಹ್ನದ ಭೋಜನ ವಿರಾಮದ ತನಕವೂ ನಡೆಯಿತು.
ನಂಜುಂಡಪ್ಪ ಸಮಿತಿ ವರದಿ ಜಾರಿ: `ಉತ್ತರ
ಕರ್ನಾಟಕದ ಅಭಿವೃದ್ಧಿಗೆ ಡಾ. ನಂಜುಂಡಪ್ಪ ಸಮಿತಿ ಸಲ್ಲಿಸಿರುವ ವರದಿಯನ್ನು
ಹಂತ ಹಂತವಾಗಿ ಸರ್ಕಾರ ಜಾರಿತರಲಿದೆ. ಬೆಳಗಾವಿಯಲ್ಲಿ `ಸುವರ್ಣ ವಿಧಾನ
ಸೌಧ', ಗದಗ ಮತ್ತು ಬಾಗಲಕೋಟೆ ಮಧ್ಯೆ ಬ್ರಾಡ್‌ಗೇಜ್ ಹೀಗೆ ಮುಂತಾದ
ಒಟ್ಟು ೧,೪೦೯ ಕೋಟಿ. ರೂಗಳ ವಿವಿಧ ಯೋಜನೆಗಳನ್ನು
ಹಮ್ಮಿಕೊಳ್ಳಲಾಗುವುದು' ಎಂದು ಭೋಜನ ವಿರಾಮದ ನಂತರ ವಿಧಾನ
ಪರಿಷತ್ತಿನಲ್ಲಿ ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಹೇಳಿದರು.