ನ್ಯಾನೋ ಪ್ರಯೋಗಾಲಯ ರಾಷ್ಟ್ರಕ್ಕೆ ಸಮರ್ಪಣೆ
ಬೆಂಗಳೂರು: ಕೇಂದ್ರ ವಿಜ್ಞಾನ ಮತ್ತು
ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ಶನಿವಾರ ದೇಶದ ಮೊಟ್ಟ ಮೊದಲ ನ್ಯಾನೋ
ಪ್ರಯೋಗಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಬೆಂಗಳೂರಿನ ಜವಾಹರ್ ನೆಹರೂ ಸುಧಾರಿತ ವೈಜ್ಞಾನಿಕ
ಸಂಶೋಧನಾ ಕೇಂದ್ರದಲ್ಲಿ ನ್ಯಾನೋ ಪ್ರಯೋಗಶಾಲೆಯನ್ನು
ಉದ್ಘಾಟಿಸಿ ಸಿಬಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ `ಜನಸಾಮಾನ್ಯರ
ಜೀವನ ಮಟ್ಟ ಸುಧಾರಿಸಲು ಜಪಾನ್, ಜರ್ಮನಿ, ಅಮೇರಿಕಾ ಹೀಗೇ
ಯಾವುದೇ ರಾಷ್ಟ್ರದೊಂದಿಗೆ ಸೇರಿ ಕೆಲಸಮಾಡಲು ಸಿದ್ಧ' ಎಂದು
ಹೇಳಿದರು.
ಮಕ್ಕಳಿಗೆ ವಿಜ್ಞಾನ: ಇದೇ ಸಂದರ್ಭದಲ್ಲಿ
ಸಿಬಾಲ್ `ಮುಂದಿನ ಐದು ವರ್ಷಗಳಲ್ಲಿ ವಿಜ್ಞಾನವನ್ನು ಹತ್ತು ಲಕ್ಷ
ಮಕ್ಕಳ ಹತ್ತಿರ ತೆಗೆದು ಕೊಂಡು ಹೋಗುವ ವಿಚಾರವಿದೆ. ನೋಬೆಲ್
ಪ್ರಶಸ್ತಿ ವಿಜೇತರಂತಹ ವಿಜ್ಞಾನಿಗಳು ಭಾಗವಹಿಸುವ ವಿಶ್ವ ಮಟ್ಟದ
ಬೇಸಿಗೆ ಶಿಬಿರಕ್ಕೆ ೧೦ ರಿಂದ ೧೭ ವಯಸ್ಸಿನ ಸುಮರು ೫೦ ಸಾವಿರ
ಮಕ್ಕಳನ್ನು ಕಳಿಸಲು ನಿರ್ಧರಿಸಲಾಗಿದೆ' ಎಂದು ಹೇಳಿದರು.