ಉಕ್ಕಿನ ಮೇಲೆ ಬಂಡಾವಳ ಹೂಡಲು ಖಾಸಗಿ ಸಂಸ್ಥೆ
ಸಿದ್ಧ
ಬೆಂಗಳೂರು: ಉತ್ತರ ಕರ್ನಾಟಕದ
ಬಳ್ಳಾರಿ, ರಾಯಚೂರು, ಕೊಪ್ಪಳ, ಜಿಲ್ಲೆಗಳು ಅತಿ ಹೆಚ್ಚಿನ ಕಬ್ಬಿಣದ
ಅದಿರನ್ನು ಉಳ್ಳ ಪ್ರದೇಶಗಳಾಗಿವೆ. ಈಗಾಗಲೇ ಖಾಸಗಿ ವಲಯಗಳು
೩೦,೬೦೦ ಕೋಟಿ ರೂ ಬಂಡವಾಳವನ್ನು ಉಕ್ಕು ಮತ್ತು ಅದಿರುಗಳ
ಉತ್ಪಾದನೆಯ ಮೇಲೆ ಹೂಡಿವೆ.
ಬಳ್ಳಾರಿಯೊಂದರಲ್ಲೇ ೧೪,೦೮೩ ಕೋಟಿ ರೂ ಮತ್ತು
ರಾಯಚೂರಿನಲ್ಲಿ ೧೨,೭೪೮ ಕೋಟಿ ರೂ ಮತ್ತು ಕೊಪ್ಪಳದಲ್ಲಿ ೩,೭೩೩
ಕೋಟಿ. ರೂ ಹೂಡಲಾಗಿದೆ.
ಭಾರತದಲ್ಲಿ ತೀವ್ರವಾಗುತ್ತಿರುವ ಆರ್ಥಿಕ
ಬೆಳವಣಿಗೆ ಹಾಗೂ ಹೆಚ್ಚುತ್ತಿರುವ ಉಕ್ಕಿನ ಅಗತ್ಯತೆ ಅನೇಕ ದೊಡ್ಡ
ಕಂಪೆನಿಗಳು ಇಲ್ಲಿ ಬಂಡವಾಳ ಹೂಡುವಂತೆ ಮಾಡಿವೆ. ಜಿಂದಾಲ್ ವಿಜಯನಗರ
ಸ್ಟೀಲ್, ಜೆಎಸ್‌ಡಬ್ಲು , ಸೌತ್ ವೆಸ್ಟ್ ಐರನ್ ಸ್ಟೀಲ್ ಲಿ. ಕಿರ್ಲೋಸ್ಕರ್
ಕಂಪೆನಿಗಳು ಈ ಉದ್ಯಮದಲ್ಲಿ ಬಂಡವಾಳ ಹೂಡಲು ಮುಂದಾಗಿರುವ ಪ್ರಮುಖ
ಸಂಸ್ಥೆಗಳು. `ಉತ್ತರ ಕರ್ನಾಟಕದ ಭಾಗದಲ್ಲಿ ಅದಿರಿನ ಗಣಿಗಾರಿಕೆಗೆ
ಕಂಪೆನಿಗಳು ಮುಂದಾಗಿರುವುದು ಸಂತಸದ ವಿಷಯ' ಎಂದು
ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.