ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ
ಪ್ರಾರಂಭ
ಬೆಳಗಾವಿ: ಸೋಮವಾರದಿಂದ
ಬೆಳಗಾವಿಯಲ್ಲಿ ಪ್ರಾರಂಭವಾಗಲಿರುವ ಅಧಿವೇಶನಕ್ಕೆ ಜವಾಹರಲಾಲ್
ನೆಹರೂ ವೈದ್ಯಕೀಯ ಕಾಲೇಜಿನ ಆವರಣ ಸಂಪೂರ್ಣ ಸಜ್ಜು ಗೊಂಡಿದೆ.
ಹೆಚ್ಚು ಕಡಿಮೆ ಬೆಂಗಳೂರಿನ ವಿಧಾನ ಸಭೆಯನ್ನೇ ಯಥಾವತ್ತಾಗಿ
ನಿರ್ಮಿಸಲಾಗಿದೆ.
ಕೈಗೂಡಿದ ಕನಸು: ಉತ್ತರ ಕರ್ನಾಟಕದಲ್ಲಿ
ವರ್ಷಕ್ಕೆ ಒಂದು ಸಾರಿಯಾದರೂ ವಿಧಾನಸಭೆ ಅಧಿವೇಶನವನ್ನು ನಡೆಸಬೇಕು
ಎಂದು ಅನೇಕ ಸಾಹಿತಿಗಳು, ಪತ್ರಕರ್ತರ ಒತ್ತಾಯವಾಗಿತ್ತು. ಅದಕ್ಕೆ
ಈಗ ಕಾಲ ಕೂಡಿಬಂದಿದೆ. ಈ ಅಧಿವೇಶನವನ್ನು ರಾಜಧಾನಿಯಿಂದಾಚೆಗೆ ನಡೆಸುತ್ತಿದ್ದು,
ದಕ್ಷಿಣ ಭಾರತದಲ್ಲೇ ಪ್ರಥಮ ಪ್ರಯೋಗವಾಗಿದೆ.