ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ
ಪ್ಯಾರೀಸ್: ಪ್ಯಾರೀಸ್‌ನ ಪತ್ರಿಕೆಯೊಂದು
ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಸತ್ತು ಹೋಗಿದ್ದಾನೆ ಎಂದು ವರದಿ
ಮಾಡಿದೆ. ಸೌದಿ ಅರೇಬಿಯಾ ಮತ್ತು ಫ್ರಾನ್ಸ್ ದೇಶದ ಗುಪ್ತಚರ ಮೂಲದ
ಮಾಹಿತಿಯನ್ನಾಧರಿಸಿ `ಲಿಸ್ಟ್ ರಿಪಬ್ಲಿಕನ್' ಎನ್ನುವ ಫ್ರಾನ್ಸ್ ಪತ್ರಿಕೆ ಈ
ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿರುವುದನ್ನು ಖಚಿತಪಡಿಸಿದೆ.
ಫ್ರಾನ್ಸ್ ರಕ್ಷಣಾಸಚಿವ ಮಿಷೆಲ್ ಅಲಿಯಟ್ ಈ ವರದಿಯ
ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡುವುದಾಗಿ ಹೇಳಿದ್ದಾರೆ.
ಅಮೇರಿಕಾ ರಕ್ಷಣ ಇಲಾಖೆಯ ಅಧಿಕಾರಿಗಳೊಬ್ಬರು ಈ ವರದಿಯನ್ನು
ತಳ್ಳಿಹಾಕಿ `ಲಾಡೆನ್ ನಿಜವಾಗಿಯೂ ಸತ್ತಿದ್ದರೆ ಮೊದಲು ಅಮೇರಿಕಾಕ್ಕೆ
ತಿಳಿಯುತ್ತಿತ್ತು; ಫ್ರಾನ್ಸ್‌ಗಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
`ಲಾಡೆನ್ ಸಾವಿನ ವರದಿಯ ಬಗ್ಗೆ ಯಾವುದೇ
ವಿದೇಶಿ ಸರ್ಕಾರ ತಮ್ಮ ಜೊತೆ ಮಾತನಾಡಿಲ್ಲ' ಎಂದು ಪಾಕಿಸ್ತಾನ
ಹೇಳಿದೆ.