Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 September 2006 01:00 PM

ಗೆಲುವಿನ ಹಾದಿಯಲ್ಲಿ ಮುಗ್ಗರಿಸಿದ ಭಾರತ

ಕೌಲಾಲಂಪುರ: ಬ್ರೆಟ್ ಲೀ ಅವರ ಮಾರಕ ಬೌಲಿಂಗ್ ಧಾಳಿಗೆ ಸಿಕ್ಕಿ ತತ್ತರಿಸಿದ ಭಾರತ ತಂಡ ಡಿಎಲ್‌ಎಫ್ ಕಪ್‌ನಿಂದ ಹೊರಬಿದ್ದಿದೆ. ಫೈನಲ್ಸ್ ತಲುಪಲು ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲ್ಲಲೇ ಬೇಕಿದ್ದ ಭಾರತ ೪೩.೫ ಓವರ್‌ಗಳಲ್ಲಿ ೧೯೫ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಭಾರತದ ಬೌಲರ್‌ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ಸಿಲುಕಿ ೪೮.೧ ಓವರ್ ಗಳಲ್ಲಿ ೨೧೩ ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರ ಮಾಥ್ಯೂ ಹೇಡನ್ ೫೪ ರನ್ ಗಳಿಸಿದರು. ಆಸ್ಟ್ರೇಲಿಯಾ ತಂಡದ ಹೇಡನ್, ಮಾರ್ಟಿನ್, ಹಾಗ್ ಮೂವರು ಆಟಗಾರರು ರನೌಟ್ ಆಗಿದ್ದು ವಿಶೇಷ.

ಭಾರತದ ಪರ ಅಗರ್ಕರ್ ಹಾಗೂ ರುದ್ರ ಪ್ರತಾಪ್ ಸಿಂಗ್ ತಲಾ ೨ ವಿಕೆಟ್ ಪಡೆದರು.

ಅಂಪೈರ್‌ಗಳ ಪ್ರಮಾದ: ಮೆಕ್ ಗ್ರಾಥ್ ಎಸೆತವೊಂದನ್ನು ಸಚಿನ್ ಬಾರಿಸಲು ಹೋದಾಗ ಚೆಂಡು ಸಚಿನ್ ರ ಭುಜಕ್ಕೆ ತಾಗಿ ಕೀಪರ್ ಕೈಸೇರಿತು. ಆಗ ಸಚಿನ್ ಅವರನ್ನು ಔಟ್ ಎಂದು ತೀರ್ಪಿತ್ತ ಅಂಪೈರ್ ಮಾರ್ಕ್ ಬೆನ್ಸನ್ ನಂತರ ತನ್ನ ತಪ್ಪಿನ ಅರಿವಾಗಿ ಸಚಿನ್‌ರನ್ನು ಪುನಃ ಆಡಲು ಕರೆದರು.

ಆಸೀಸ್‌ನ ಬ್ರಾಡ್ ಹಡ್ಡಿನ್ ರನೌಟ್ ತೀರ್ಪನ್ನು ಸಹ ಇದೇ ರೀತಿ ಹಿಂತೆಗೆದುಕೊಳ್ಳಲಾಯಿತು. ಹರಭಜನ್ ಸಿಂಗ್ ಹಡ್ಡಿನ್‌ರನ್ನು ರನೌಟ್ ಮಾಡುವ ಯತ್ನದಲ್ಲಿ ಚೆಂಡು ಕೈ ಸೇರುವ ಮೊದಲೇ ಬೇಲ್ಸ್ ಉದುರಿತ್ತು.

ಭಾರತದ ಪರ ದಿನೇಶ್ ಮೊಂಗಿಯಾ ಹೋರಾಟದ ಆಟವನ್ನು ಪ್ರದರ್ಶಿಸಿ ೬೩ ರನ್ ಗಳಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ಬ್ರೆಟ್ ಲೀ ೩೮ ರನ್ನಿತು ೫ ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದರು.

ಇನ್ನಷ್ಟು

ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

ತುಣುಕು ಸುದ್ದಿಗಳು

ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ

ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ

ಶಂಕರಮೂರ್ತಿ ಹೇಳಿಕೆ ತಪ್ಪು : ಕಾರ್ನಾಡ್

ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ

ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com