Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 22 September 2006 06:04 PM

ಮೌನವಾದ ಎಂಇಎಸ್

ಬೆಳಗಾವಿ: ಬೆಳಗಾವಿ ವಿಧಾನ ಸಭಾ ಅಧಿವೇಶನಕ್ಕೆ ಸಡ್ಡು ಹೊಡೆಯಲು ಮುಂದಾದ ಮಹಾರಾಷ್ಟ್ರ ಏಕೀಕರಣ ಸಮಿತಿ-ಎಂಇಎಸ್‌ನ `ಮಹಾಮೇಳಾವ' ಯೋಜನೆ ತಲೆ ಕೆಳಗಾಗುತ್ತಿದೆ. ಸುಮಾರು ೨೫ ಸಾವಿರ ಜನರನ್ನು ಸೇರಿಸುವುದಾಗಿ ಎಂಇಎಸ್ ಹೇಳಿಕೊಂಡಿತ್ತು. ಆದರೆ ಈಗ ರ್‍ಯಾಲಿ ನಡೆಸಲು ಜನರನ್ನು ಕಲೆಹಾಕಲು ಎಂಇಎಸ್ ಹೆಣಗಾಡುತ್ತಿದೆ. `ತಮ್ಮದು ಕೇವಲ ಸಾಂಕೇತಿಕ ಪ್ರತಿಭಟನೆ' ಎಂದು ಎಂಇಎಸ್ ಈಗ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದೆ.

ಕಿರಿಕ್: ಬೆಳಗಾವಿಯಲ್ಲಿ ಈಗ ಹೊಸ ಗಾದೆ ಚಾಲ್ತಿಯಲ್ಲಿದೆ. `ಎಂಇಎಸ್‌ವಾದಿ ಲೋಕವಿರೋಧಿ ಅಂತಾ.

ಟಿಕೇಟ್ ಇಲ್ಲದೆ ಪ್ರಯಾಣಿಸಿ ಸಿಕ್ಕುಬಿದ್ದ ಶಿಬು ಪತ್ನಿ

ಕಾನ್ಪುರ: ಇತ್ತೀಚೆಗೆ ಉತ್ತರ ಪ್ರದೇಶದ ಸಚಿವ ಯಾಕೂಬ್ ಖುರೇಶಿ ಟಿಕೇಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದು ದಂಡ ತೆತ್ತು ಸುದ್ದಿಯಾಗಿದ್ದರು. ಈಗ ಕೇಂದ್ರ ಗಣಿಗಾರಿಕೆ ಸಚಿವ ಶಿಬು ಸೊರೇನ್ ಅವರ ಪತ್ನಿ ರೂಬಿ ಸೊರೇನ್ ನವದೆಹಲಿ-ಹಾರೋರಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೊದಲನೇ ದರ್ಜೆಯಲ್ಲಿ ಟಿಕೇಟ್ ಇಲ್ಲದೇ ಪ್ರಯಾಣಿಸಿ ರೈಲು ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದು ೭, ೧೦೩ ರೂ. ದಂಡ ತೆತ್ತಿದ್ದಾರೆ.

ಕಿರಿಕ್: ವಿಐಪಿಗಳು ಹೀಗೆ ರೈಲಿನಲ್ಲಿ ಓಡಾಡುತ್ತಿದ್ದರೆ ರೈಲ್ವೇ ಇಲಾಖೆಗೆ ಒಳ್ಳೆ ಲಾಭ.

ಐಟಿ ಕಂಪೆನಿಗಳೇ ನೈಸರ್ಗಿಕ ಸಂಪತ್ತಿಗೆ ರಾಯಭಾರಿಗಳಾಗಿ

ಬೆಂಗಳೂರು: ಸಾಮಾಜಿಕ ಜವಾಬ್ದಾರಿ ಹೊರಬೇಕೆಂದು ರಾಜ್ಯದ ಐಟಿ ಕಂಪೆನಿಗಳಿಗೆ ಕೆಆರ್‌ಇಡಿಎಲ್ ಕರೆ ನೀಡಿದೆ. ಸರ್ಕಾರಿ ಸ್ವಾಮ್ಯದ ಶಕ್ತಿ ಪುನರುಜ್ಜೀವನ ನಿಗಮವು ಮಾಡಿರುವ ಮನವಿಯಲ್ಲಿ ಐಟಿ ಕಂಪೆನಿಗಳು ಹಸಿರು ಶಕ್ತಿಯ ಪ್ರಚಾರಕ್ಕೆ ರಾಯಭಾರಿಗಳಾಗಬೇಕೆಂದು ಕೇಳಿಕೊಂಡಿದೆ.

`ನಿಮ್ಮ ಕಂಪೆನಿಯಲ್ಲಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನೇ ಉಪಯೋಗಿಸಿ, ಪರಿಸರದ ಬಗ್ಗೆ ಜನರಿಗೆ ಕಾಳಜಿ ಮೂಡುವಂತೆ ಮಾಡಿ. ಶಕ್ತಿಯ ಪುನರ್ಬಳಕೆ ಬಗ್ಗೆ ತಿಳುವಳಿಕೆ ಮೂಡಿಸಿ ಎಂದು ಕೆಆರ್‌ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಶಿವಲಿಂಗಯ್ಯ ಹೇಳಿದ್ದಾರೆ.

ನೈಸರ್ಗಿಕ ಶಕ್ತಿಗಳಾದ ಸೌರಶಕ್ತಿ, ಗಾಳಿಯಿಂದ ಉತ್ಪನ್ನವಾಗುವ ಶಕ್ತಿಯ ಬಳಕೆ ಮಾಡಲು ಶಿವಲಿಂಗಯ್ಯ ಕರೆ ನೀಡಿದ್ದಾರೆ.

ಕಿರಿಕ್: ಮೊದಲು ಮಾನವ ಸಂಪನ್ಮೂಲ(ಶಕ್ತಿ) ಸರಿಯಾಗಿ ಬಳಕೆ ಮಾಡಲಿ, ಆಮೇಲೆ ಪರಿಸರದ ಮಾತು ಅಂತಿರಾ.

ಕರ್ನಾಟಕದ ಚಳಿಗಾಲದ ರಾಜಧಾನಿ ಬೆಳಗಾವಿ

ಬೆಳಗಾವಿ: ಸೆಪ್ಟೆಂಬರ್ ೨೫ ರಿಂದ ಬೆಳಗಾವಿಯಲ್ಲಿ ವಿಧಾನ ಸಭೆ ಅಧಿವೇಶನ ನಡೆಯಲಿದೆ. ಇದನ್ನೆಲ್ಲ ನೋಡಿದರೆ ಬೆಳಗಾವಿ ಕರ್ನಾಟಕದ ಇನ್ನೊಂದು ರಾಜಧಾನಿಯಾಗಲಿದೆಯೇ? ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುತ್ತಿದೆ.

ಆದರೆ ಕೇವಲ ಪ್ರಶ್ನೆಯಾಗಿ ಇದು ಉಳಿದಿಲ್ಲ. ಸರ್ಕಾರಿ ಅಧಿಕಾರಿಗಳ ಗುಂಪೊಂದು ಎರಡನೇ ವಿಧಾನ ಸೌಧ(ಆಡಳಿತ ಕಚೇರಿ)ವನ್ನು ನಿರ್ಮಿಸಲು ಯೋಗ್ಯ ಸ್ಥಳವನ್ನು ಹುಡುಕುತ್ತಿದೆ.

ಸುದ್ದಿ ಮೂಲಗಳ ಪ್ರಕಾರ ಈ ಗುಂಪು ಕೆಲವು ಸ್ಥಳಗಳನ್ನು ಈಗಾಗಲೇ ಆಯ್ಕೆಮಾಡಿದೆ. ಸುಮಾರು ೫೦೦ ಎಕರೆ ಜಾಗದಲ್ಲಿ ೧೫೦ ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ವಸತಿ ಸಮುಚ್ಛಯವನ್ನು ನಿರ್ಮಿಸಲಾಗುವುದು ಎಂದು ಗುಂಪಿನ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

ಕಿರಿಕ್: ಹಾಗಾದರೆ ಮಡಿಕೇರಿಲಿ ಅಧಿವೇಶನ ನಡೆದರೆ ಮಡಿಕೇರಿ ಬೇಸಿಗೆ ರಾಜಧಾನಿ ಆಗುತ್ತಾ.

ಮೈಸೂರು ವೀಳ್ಯ ಪ್ಯಾಕೇಟ್‌ನಲ್ಲಿ ಲಭ್ಯ

ಬೆಂಗಳೂರು: ಶುಭ ಸಮಾರಂಭಕ್ಕೆ ವಿಳೇದೆಲೆಯನ್ನು ಖರೀದಿಸಿ, ರೆಡಿಮೇಡ್ ಅಡಿಕೆ ಪುಡಿ ತರುತ್ತಿದ್ದದ್ದು ವಾಡಿಕೆ. ಈಗ ಎಲ್ಲವೂ ರೆಡಿಮೇಡ್ ರೂಪದಲ್ಲಿ ಲಭ್ಯ. ಈ ರೇಡಿಮೆಡ್ ವೀಳ್ಯದೆಲೆಯನ್ನು ರೂಪಿಸಿದವರು ಬೆಂಗಳೂರಿನ ರೂಪೇನ ಅಗ್ರಹಾರದ ನಿವಾಸಿ ನಂಜೇಗೌಡ.

ನೈಸರ್ಗಿಕವಾದ ಮೈಸೂರು ವೀಳ್ಯದೆಲೆ, ಅಡಿಕೆ ಪುಡಿ, ಸುಣ್ಣ, ಏಲಕ್ಕಿ, ಲವಂಗ, ಸೋಂಪು ಪುಡಿ, ಸಕ್ಕರೆ, ಜಾಯಿಕಾಯಿ, ಜಾಪತ್ರೆ, ಅರಿಪತ್ತಿ ಎಲೆ, ಸಿಹಿ ಮಿಶ್ರಣವನ್ನು ಸಮವಾಗಿ ಬೆರೆಸಿ ತಯಾರಿಸಲಾಗುವ `ಮೈಸೂರು ವೀಳ್ಯ'ದಲ್ಲಿ ಯಾವುದೇ ರಾಸಾಯನಿಕಗಳಿರುವುದಿಲ್ಲ.

ಈ ಉತ್ಪನ್ನಕ್ಕೆ ಬೊಮ್ಮನಹಳ್ಳಿ ನಗರಸಭೆ ಅನುಮತಿ ನೀಡಿದೆ. `ಮೈಸೂರು ವೀಳ್ಯ'ವನ್ನು ಆಹಾರ ವಸ್ತುವೆಂದು ಪರಿಗಣಿಸಬೇಕೆಂದು ಕೋರಿ `ಸಿಎಫ್‌ಟಿಆರ್‌ಐ'ಗೆ ಮನವಿ ಸಲ್ಲಿಸಲಾಗಿದೆ ಎಂದು ನಂಜೇಗೌಡ ಹೇಳಿದ್ದಾರೆ.

ಕಿರಿಕ್: `ನೀರಾ'ನ ನೈಸರ್ಗಿಕ ಅಂದಾಯ್ತು. ಈಗ ಬೀಡಾ ಬೇಡ. ವೀಳ್ಯ ತಿಂದು ನೋಡಿ ಎಂದು ಚಳುವಳಿ ಶುರುವಾಗಬಹುದು.

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com