ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ
ಮೈಸೂರು: ಮೈಸೂರಿನ ರಂಗಾಯಣ
ತಂಡವು ಈ ಬಾರಿ ದಸರಾದಲ್ಲಿ `ನವರಾತ್ರಿ ರಂಗೋತ್ಸವ' ವನ್ನು
ಆಯೋಜಿಸಿದೆ. ಈ ಉತ್ಸವವು ಸೆಪ್ಟೆಂಬರ್ ೨೩ ರಿಂದ ಅಕ್ಟೋಬರ್ ೧ರ ತನಕ
ನಡೆಯಲಿದೆ.
ನವರಾತ್ರಿಯ ಸಂದರ್ಭದಲ್ಲಿ ಆಯ್ದ
ನಾಟಕಗಳ ಪ್ರದರ್ಶನವನ್ನು ನೀಡಲಾಗುವುದು ಎಂದು
ರಂಗಾಯಣದ ನಿರ್ದೇಶಕ ಚಿದಂಬರರಾವ್ ಜಂಬೆ ಸುದ್ದಿಗಾರರಿಗೆ
ಹೇಳಿದ್ದಾರೆ.
ಪ್ರಾರಂಭದ ನಾಟಕವಾಗಿ ಸೆಪ್ಟೆಂಬರ್ ೨೩ ರಂದು
`ಬೀಚಿ ಬುಲೆಟ್ಸ್' ನಾಟಕವನ್ನು ಪ್ರದರ್ಶಿಸಲಾಗುವುದು. ನಾಟಕಕ್ಕೆ
ಟಿಕೆಟ್‌ಗಳನ್ನು ಪ್ರದರ್ಶನದ ಒಂದು ಗಂಟೆ ಮೊದಲು ನೀಡಲಾಗುವುದು
ಎಂದು ಜಂಬೆಯವರು ಹೇಳಿದ್ದಾರೆ.