ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ
ಗಾಂಧೀನಗರ: ಗುಜರಾತ್ ರಾಜ್ಯದ ಮಾಜಿ
ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ರವರ
ಮನೆಯಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿ ಅಪಘಾತದಿಂದ ಅವರ ಪತ್ನಿ ಲೀಲಾಬೇನ್ ಪಟೇಲ್ ಗುರುವಾರ ಮೃತಪಟ್ಟಿದ್ದಾರೆ.
ಲೀಲಾಬೇನ್ ಅವರು ಒಂದು ಚಿಕ್ಕ ಕೋಣೆಯಲ್ಲಿ
ಕುಳಿತಿದ್ದರು ಆಗ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಆದರೆ ಅನಾರೋಗ್ಯ
ಮತ್ತು ಸ್ಥೂಲ ಕಾಯದ ಕಾರಣ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿದ್ದಾರೆ
ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಮಹೇಶ್ ಮೋಡ್ ಹೇಳಿದ್ದಾರೆ. ಪಕ್ಕದ
ಕೋಣೆಯಲ್ಲಿದ್ದ ಕೇಶುಭಾಯಿ ಅವರು ಅಪಾಯದಿಂದ ಪಾರಾಗಿದ್ದಾರೆ
ಎಂದು ಅಗ್ನಿ ಶಾಮಕ ದಳದವರು ಹೇಳಿದ್ದಾರೆ.