ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ಡಾ. ವಿಷ್ಣುವರ್ಧನ್
ಮೈಸೂರು: ಈ ಬಾರಿಯ ದಸರಾ ಚಲನಚಿತ್ರ
ಉತ್ಸವವನ್ನು ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರು ಸೆಪ್ಟೆಂಬರ್ ೨೩
ರಂದು ಕಲಾ ಮಂದಿರದಲ್ಲಿ ಉದ್ಘಾಟಿಸಲಿದ್ದಾರೆ.
ಮೈಸೂರಿನ ರಿಜೆನ್ಸಿ, ರಂಜೀತ್, ಸ್ಟರ್ಲಿಂಗ್,
ತಿಬ್ಬಾದೇವಿ ಹಾಗೂ ಶ್ರೀನಾಗರಾಜ್ ಚಿತ್ರಮಂದಿರಗಳಲ್ಲಿ ಸುಮಾರು ೩೮ ಪ್ರಶಸ್ತಿ
ವಿಜೇತ ಚಿತ್ರಗಳು ಹಾಗೂ ಇತರ ಜನಪ್ರಿಯ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಎರಡು ಚಿತ್ರಗಳು ಬಾಲ ಭವನದಲ್ಲಿ ಪ್ರದರ್ಶನ ಕಾಣಲಿದೆ ಎಂದು
ದಸರಾ ಚಲನಚಿತ್ರ ಉಪ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ನಟ ಎಂ. ಪಿ.
ಶಂಕರ್ ಸುದ್ದಿಗಾರರಿಗೆ ಹೇಳಿದರು.