ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ
ಬೆಂಗಳೂರು: ಐಐಎಂ, ಐಐಟಿ ಮೊದಲಾದ ಉನ್ನತ
ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.೨೭ ರಷ್ಟು ಮೀಸಲಾತಿ
ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದೇ ಬರುತ್ತದೆ ಎಂದು
ಕೇಂದ್ರ ಮೀಸಲಾತಿ ಅಧ್ಯಯನ ಆಯೋಗದ ಅಧ್ಯಕ್ಷ ಎಂ. ವೀರಪ್ಪ
ಮೊಯ್ಲಿ ಹೇಳಿದ್ದಾರೆ.
ಇದೇ ತಿಂಗಳ ಅಂತ್ಯದಲ್ಲಿ ಕೇಂದ್ರ ಮೀಸಲಾತಿ
ಅಧ್ಯಯನ ಆಯೋಗದ ವರದಿಯನ್ನು ಪ್ರಧಾನಿ ಡಾ. ಮನಮೋಹನ
ಸಿಂಗ್ ಮತ್ತು ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರಿಗೆ ಸಲ್ಲಿಸುತ್ತಿರುವ
ಹಿನ್ನೆಲೆಯಲ್ಲಿ ಮತ್ತೆ ಮೀಸಲಾತಿಯ ಬೆಂಕಿ ಭುಗಿಲೇಳುವ ಸಂಶಯವಿದೆ.
`ಆಯೋಗವು ೧೧ ನೇ ಪಂಚವಾರ್ಷಿಕ ಯೋಜನೆಯ
ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಅಳವಡಿಸಲು ಸುಮಾರು
೧೬,೦೦೦ ಕೋಟಿ. ರೂಗಳ ಅವಶ್ಯಕತೆ ಉಂಟಾಗಬಹುದೆಂದು ಅಂದಾಜಿಸಿದೆ.
ಮೀಸಲಾತಿ ಅಳವಡಿಸಿಕೊಂಡರೂ ಶಿಕ್ಷಣದ ಗುಣಮಟ್ಟ ಇಳಿದುಹೋಗದಂತೆ
ಎಚ್ಚರ ವಹಿಸಲಾಗುತ್ತಿದೆ' ಎಂದು ಮೊಯ್ಲಿ ಹೇಳಿದ್ದಾರೆ.