`ಮುಂದಿನ ವರ್ಷ ಏಪ್ರಿಲ್ ನಂತರ ಕರ್ನಾಟಕ ಹಾಗೂ
ರಾಜಸ್ಥಾನದಲ್ಲಿ ಈ ರೀತಿಯ ರೈಲು ಸಂಚರಿಸಲಿದೆ' ಎಂದು ಭಾರತೀಯ
ರೈಲ್ವೇಯ ಪ್ರವಾಸೋದ್ಯಮ ವಿಭಾಗದ ನಿರ್ದೇಶಕ ವಿಪ್ಲಯ್
ಕುಮಾರ್ ಹೇಳಿದ್ದಾರೆ. ಕರ್ನಾಟಕ ಹಾಗೂ ರಾಜಸ್ಥಾನದ ಪ್ರವಾಸೋದ್ಯಮಕ್ಕೆ
ಈ ರೈಲಿನಿಂದ ಸಹಕಾರಿಯಾಗಲಿದೆ ಎಂದು ವಿಪ್ಲಯ್ ಕುಮಾರ್
ಹೇಳಿದ್ದಾರೆ. ಕರ್ನಾಟಕದಲ್ಲಿ ಸಂಚರಿಸಲಿರುವ ಪ್ಯಾಲೇಸ್ ಆನ್ ವ್ಹೀಲ್ಸ್
ರೈಲು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶ, ಮೈಸೂರು, ಬೇಲೂರು,
ಹಳೆಬೀಡು, ಶ್ರವಣಬೆಳಗೊಳ, ಬಾದಾಮಿ, ಐಹೊಳೆ ಮುಂತಾದ ಪ್ರೇಕ್ಷಣೀಯ
ಸ್ಥಳಗಳ ಮುಖಾಂತರ ಸಾಗಲಿದೆ.