Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 20 September 2006 11:55 PM

ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ

ಟೋಕಿಯೋ: ನೀವು ದಿನಾ ಹಸಿರು ಚಹಾ ಸೇವಿಸುತ್ತೀರಾ? ಹೌದಾದಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಬರುವುದು ನಿಮಗೆ ಬೇರೆಯವರಿಗಿಂತ ಶೇ. ೨೫ ರಷ್ಟು ಕಡಿಮೆ!

ಜಪಾನ್‌ನ ತೊಹೊಕು ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ೪೦ ರಿಂದ ೭೯ ವರ್ಷ ವಯಸ್ಸಿನ ನಡುವಿನ ೪೦,೫೩೦ ಜನರ ಮೇಲೆ ೧೧ ವರ್ಷ ದೀರ್ಘಕಾಲ ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ.

೧೧ ವರ್ಷದ ಅವಧಿಯಲ್ಲಿ ಜಪಾನ್‌ನ ಈಶಾನ್ಯ ಭಾಗದಲ್ಲಿ ೪,೨೦೯ ಜನ ಸಾವಿಗೀಡಾಗಿದ್ದಾರೆ. ಇದರಲ್ಲಿ ೧,೧೩೪ ಜನ ಕ್ಯಾನ್ಸರ್‌ನಿಂದ ಸತ್ತರೆ, ೮೯೨ ಜನ ಹೃದಯ ಸಂಬಂಧಿ ಖಾಯಿಲೆಗಳಿಂದ ಸಾವಿಗೀಡಾಗಿದ್ದಾರೆ. ದಿನಂಪ್ರತಿ ಐದಕ್ಕಿಂತ ಹೆಚ್ಚು ಕಪ್ ಹಸಿರು ಚಹಾ ಸೇವಿಸುವವರು ಹೃದಯ ಸಂಬಂಧಿ ಖಾಯಿಲೆಗಳಿಂದ ಸಾಯವುದು ಶೇ. ೧೬ ರಷ್ಟು ಕಡಿಮೆಯಂತೆ. ಆದರೆ ಕ್ಯಾನ್ಸರ್‌ಗೂ ಹಸಿರು ಚಹಾ ಸೇವಿಸುವುದಕ್ಕೂ ಯಾವ ರೀತಿಯ ಸಂಬಂಧಗಳೂ ಕಂಡು ಬಂದಿಲ್ಲ.

ಈ ಅಧ್ಯಯನದ ಮುಖ್ಯಸ್ಥರಾದ ಡಾ. ಶಿನಿಚಿ ಕುರಿಯಾಮಾ `ಹಸಿರು ಚಹಾ ಸೇವಿಸುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ದೂರವಾಗಿ ಆಯುಷ್ಯ ಹೆಚ್ಚುತ್ತದೆ? ಎಂದು ಅಭಿಪ್ರಾಯ ಪಡುತ್ತಾರೆ. ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಹೃದಯ ಸಂಬಂಧಿ ಖಾಯಿಲೆಗಳಿಂದ ಜನರು ಸಾಯುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದು ಡಾ. ಶಿನಿಚಿ ಹೇಳಿದ್ದಾರೆ.

ಇನ್ನಷ್ಟು

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿ

ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ

ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ

ಜಾರ್ಖಂಡ್ ನಾಯಕನಾಗಿ ಕೋಡಾ ಅಧಿಕಾರ ಸ್ವೀಕಾರ

ಬಿಪಿಎಲ್‌ನಲ್ಲಿ ಬೆಂಕಿ: ೧೨ ಕೋಟಿ. ರೂ ನಷ್ಟ

ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ

ರಾಜ್ಯದಲ್ಲಿ ೧, ೪೧೬ ಶಾಲೆಗಳ ಪರವಾನಿಗೆ ರದ್ದು

ವಿಪತ್ತುಗಳ ದತ್ತಸಂಚಯ ತಯಾರಿಕೆಯಲ್ಲಿ ಇಸ್ರೋ

ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com