Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 20 September 2006 11:55 PM

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿGirish Kasaravalli, Director

ಬೆಂಗಳೂರು: ೨೦೦೫-೦೬ ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟ ಮಾಡಲಾಗಿದೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು? ಚಿತ್ರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಆಗಿದೆ.

Rathnaja, Directorಯುವ ನಿರ್ದೇಶಕ ರತ್ನಜರವರ `ನೆನಪಿರಲಿ? ಚಿತ್ರ ಎರಡನೇ ಅತ್ಯುತ್ತಮ ಚಿತ್ರ, ನಾಗತೀಹಳ್ಳಿ ಚಂದ್ರಶೇಖರ್ ರವರ `ಅಮೃತಧಾರೆ? ಚಿತ್ರ ಮೂರನೇ ಅತ್ಯುತ್ತಮ ಚಿತ್ರಗಳೆಂದು ಪ್ರಶಸ್ತಿಗಳ ಆಯ್ಕೆ ಸಲಹಾ ಸಮಿತಿ ಅಧ್ಯಕ್ಷ ಟಿ.ಎನ್. ಸೀತಾರಾಮ್ ಸುದ್ದಿಗಾರರಿಗೆ ಹೇಳಿದರು.Shivaraj Kumar, Actor

ಅತ್ಯುತ್ತಮ ನಟನೆಗಾಗಿ ನೀಡುವ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ ಶಿವರಾಜ್ ಕುಮಾರ್(ಚಿತ್ರ: ಜೋಗಿ), ಅತ್ಯುತ್ತಮ ನಟಿ ಪ್ರಶಸ್ತಿಗೆ ಪವಿತ್ರಾ ಲೋಕೇಶ್(ಚಿತ್ರ: ನಾಯಿನೆರಳು) ಅವರನ್ನು ಆಯ್ಕೆ ಮಾಡಲಾಗಿದೆ.

S. Ramachandra, Photographerಹಿರಿಯ ನಟಿ ಜಯಂತಿ ಅವರನ್ನು ಡಾ. ರಾಜ್ ಕುಮಾರ್ ಪ್ರಶಸ್ತಿಗೆ, ನಟ, ನಿರ್ದೇಶಕ ರವಿಚಂದ್ರನ್ ಅವರನ್ನು ದಿ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಾಗೂ ಚಲನಚಿತ್ರ ರಂಗಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ನೀಡುವ ಪ್ರಶಸ್ತಿಗೆ ಖ್ಯಾತ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಥಮ ಅತ್ಯುತ್ತಮ ಚಿತ್ರಕ್ಕೆ ಮೂರು ಲಕ್ಷ, ದ್ವಿತೀಯ ಅತ್ಯುತ್ತಮ ಚಿತ್ರಕ್ಕೆ ೨ ಲಕ್ಷ ಹಾಗೂ ತೃತೀಯ ಅತ್ಯುತ್ತಮ ಚಿತ್ರಕ್ಕೆ ೧ ಲಕ್ಷ ಬಹುಮಾನ ಮೊತ್ತ ನೀಡಬೇಕೆಂದು ಸರ್ಕಾರಕ್ಕೆ ಅಯ್ಕೆ ಸಮಿತಿಯು ಸಲಹೆ ನೀಡಿದೆ.

ಇನ್ನಿತರ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ:Hamsalekha, Music Director

ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ: ಹಂಸಲೇಖ ? ಚಿತ್ರ: ನೆನಪಿರಲಿ

ಅತ್ಯುತ್ತಮ ಗೀತ ರಚನಾಕಾರ: ಬರಗೂರು ರಾಮಚಂದ್ರಪ್ಪ - ಚಿತ್ರ: ತಾಯಿ, (ಕಿರುಬನ ಬಾಯಿಗೆ..)C. Ashwath, Music Director and Singer

ಅತ್ಯುತ್ತಮ ಹಿನ್ನೆಲೆ ಗಾಯಕ: ಸಿ. ಅಶ್ವಥ್ - ಚಿತ್ರ: ಶುಭಂ (ಆಹಾ ಯುವರಾಣಿ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಚೈತ್ರಾ ? ಚಿತ್ರ: ಅಮೃತಧಾರೆ (ಹುಡುಗಾ ಹುಡುಗಾ)

ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕಡಲ ಮಗೆ(ತುಳು)P. Sheshadri, Director

ಅತ್ಯುತ್ತಮ ಬಾಲ ನಟ ಪ್ರಶಸ್ತಿ: ಮಾ. ಕಿಶನ್ - ಚಿತ್ರ: ಕೇರಾಫ್ ಫುಟ್ ಪಾತ್

ಅತ್ಯುತ್ತಮ ಮಕ್ಕಳ ಚಿತ್ರ: ತುತ್ತೂರಿ - ನಿರ್ದೇಶನ: ಪಿ. ಶೇಷಾದ್ರಿ

ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ಬರಗೂರು ರಾಮಚಂದ್ರಪ್ಪ - ಚಿತ್ರ: ತಾಯಿMaster Kishan, Child Artist

ತೀರ್ಪುಗಾರರ ವಿಶೇಷ ಪ್ರಶಸ್ತಿ: ಡಾ. ಬಿ.ಆರ್. ಅಂಬೇಡ್ಕರ್, ಲೈಫ್ ಸ್ಟೋರಿ ಮತ್ತು ಕೇರಾಫ್ ಫುಟ್ ಪಾತ್

ಅತ್ಯುತ್ತಮ ಪೋಷಕ ನಟ ಪ್ರಶಸ್ತಿ: ಜಗ್ಗೇಶ್ - ಚಿತ್ರ: ಮಠArundathi Nag

ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ: ಅರುಂಧತಿ ನಾಗ್ - ಚಿತ್ರ: ಜೋಗಿ

ಅತ್ಯುತ್ತಮ ಕಂಠದಾನ ಕಲಾವಿದ ಪ್ರಶಸ್ತಿ: ರವೀಂದ್ರನಾಥ್ ? ಚಿತ್ರ: ಡಾ. ಬಿ.ಆರ್. ಅಂಬೇಡ್ಕರ್

ಅತ್ಯುತ್ತಮ ಕಂಠದಾನ ಕಲಾವಿದೆ ಪ್ರಶಸ್ತಿ: ಅಮೃತಾ ಸಿಂಗ್ - ಚಿತ್ರ: ನೆನಪಿರಲಿ

ಅತ್ಯುತ್ತಮ ಕಥಾ ಲೇಖಕಿ ಪ್ರಶಸ್ತಿ : ಸಿ.ಎನ್. ಮುಕ್ತಾ - ಚಿತ್ರ: ಮಿಸ್ ಕ್ಯಾಲಿಫೋರ್ನಿಯಾ

ಅತ್ಯುತ್ತಮ ಚಿತ್ರಕಥೆ : ಪ್ರೇಮ್ - ಚಿತ್ರ: ಜೋಗಿ

ಅತ್ಯುತ್ತಮ ಛಾಯಾಗ್ರಾಹಕ : ಎಚ್.ಎಂ. ರಾಮಚಂದ್ರ - ಚಿತ್ರ: ನೆನಪಿರಲಿ

ಅತ್ಯುತ್ತಮ ಸಂಭಾಷಣಾಕಾರರು : ಸುದರ್ಶನ್, ಲಕ್ಷ್ಮೀಪತಿ ಕೋಲಾರ - ಚಿತ್ರ: ಮುಖಾಮುಖಿ

ಅತ್ಯುತ್ತಮ ಧ್ವನಿಗ್ರಾಹಕ : ಜಾನ್ಸನ್ ? ಚಿತ್ರ: ಅಮೃತಧಾರೆ.

ಅತ್ಯುತ್ತಮ ಕಲಾ ನಿರ್ದೇಶಕ : ಇಸ್ಮಾಯಿಲ್, ಶಿವಕುಮಾರ್ ? ಚಿತ್ರ: ಅಹಂ ಪ್ರೇಮಾಸ್ಮಿ

ಅತ್ಯುತ್ತಮ ಸಂಕಲನಕಾರ : ಎಸ್. ಮನೋಹರ್ - ಚಿತ್ರ: ಆಕಾಶ್

ಇನ್ನಷ್ಟು

ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ

ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ

ಜಾರ್ಖಂಡ್ ನಾಯಕನಾಗಿ ಕೋಡಾ ಅಧಿಕಾರ ಸ್ವೀಕಾರ

ಬಿಪಿಎಲ್‌ನಲ್ಲಿ ಬೆಂಕಿ: ೧೨ ಕೋಟಿ. ರೂ ನಷ್ಟ

ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ

ರಾಜ್ಯದಲ್ಲಿ ೧, ೪೧೬ ಶಾಲೆಗಳ ಪರವಾನಿಗೆ ರದ್ದು

ವಿಪತ್ತುಗಳ ದತ್ತಸಂಚಯ ತಯಾರಿಕೆಯಲ್ಲಿ ಇಸ್ರೋ

ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com