ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ
ಪುಣೆ: ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್
ಭೀಮಸೇನ್ ಜೋಷಿ ಅವರನ್ನು ಸೋಮವಾರ ರಾತ್ರಿ ಪುಣೆಯ ಖಾಸಗಿ
ಆಸ್ಪತ್ರೆಗೆ ಸೇರಿಸಲಾಯಿತು. ೮೪ ವರ್ಷ ವಯಸ್ಸಿನ ಇವರು ಕೆಲ
ತಿಂಗಳಿಂದ ಅಸ್ವಸ್ಥರಾಗಿದ್ದರು. ಜೋಷಿ ಅವರನ್ನು ತೀವ್ರ ನಿಗಾ
ಘಟಕ(ಐಸಿಯು)ದಲ್ಲಿ ಇಡಲಾಗಿತ್ತು. ಈಗ ಆರೋಗ್ಯ ಸುಧಾರಣೆಯಾಗಿದೆ
ಎಂದು ಪುಣೆ ಸಹ್ಯಾದ್ರಿ ಆಸ್ಪತ್ರೆಯ ವೈದ್ಯರು ಹೇಳಿದರು.
ಪ್ರತಿ ವರ್ಷ ನಡೆಯುವ ಸವಾಯ್
ಗಂಧರ್ವ ಮಹೋತ್ಸವದಲ್ಲಿ ಅನಾರೋಗ್ಯದ ಕಾರಣದಿಂದ ಜೋಷಿಯವರು
ಪಾಲ್ಗೊಳ್ಳಲಿಲ್ಲ.