ದಸರಾದಲ್ಲಿ ಬ್ಯಾಂಡ್ ಬಾರಿಸಲಿರುವ ಪೊಲೀಸ್
ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ
ಪೊಲೀಸರ ಮ್ಯೂಸಿಕ್ ತಂಡ ಅರಮನೆ ಆವರಣದಲ್ಲಿ ಬ್ಯಾಂಡ್‌ಗಳನ್ನು
ಬಾರಿಸಲಿದ್ದಾರೆ. ಸುಮಾರು ೩೫ ರಿಂದ ೪೦ ತಂಡ ಪಾಶ್ಚಾತ್ಯ ಸಂಗೀತ ಹಾಗೂ
ದ್ವಂದ್ವ ಸಂಗೀತದ ರುಚಿಯನ್ನು ಸೆಪ್ಟೆಂಬರ್ ೨೬ ರಂದು ತೋರಿಸಲಿದ್ದಾರೆ.
ಎಲ್ಲಾ ತಂಡಗಳಿಂದ ಒಟ್ಟು ೧,೦೦೦ಕ್ಕೂ ಅಧಿಕ ಪೊಲೀಸರು ಭಾಗವಹಿಸುವ
ಸಾಧ್ಯತೆಯಿದೆ.
ಬನ್ನಿ ಮಂಟಪದ ಮೈದಾನದಲ್ಲಿ ಸೆಪ್ಟೆಂಬರ್ ೨೮
ರಂದು ದಸರಾದ ಇನ್ನೊಂದು ಆಕರ್ಷಣೆಯಾದ ವೈಮಾನಿಕ ಪ್ರದರ್ಶನ(ಏರ್
ಶೋ)ವನ್ನು ಭಾರತೀಯ ಮೈಮಾನಿಕ ದಳ(ಐಎಎಫ್)ನ ಸ್ಕೈ
ಡೈವರ್‌ಗಳು ತೋರಲಿದ್ದಾರೆ.
ಈ ಬಾರಿ ಸ್ತಬ್ದ ಚಿತ್ರಗಳ ಸಂಖ್ಯೆಯನ್ನು ಇಪ್ಪತ್ತಕ್ಕೆ
ಇಳಿಸಲಾಗಿದೆ. `ಸುವರ್ಣ ಕರ್ನಾಟಕ' ಮಾಹೋತ್ಸವವನ್ನು ಮುಖ್ಯವಸ್ತುವನ್ನಾಗಿಸಿಕೊಂಡು
ಪಂಜಿನ ಕಾವಾಯಿತು ಪ್ರದರ್ಶನ ನೀಡಲಾಗುವುದು ಎಂದು ಮೈಸೂರಿನ
ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.