Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 18 September 2006 10:34 AM

ಕರ್ನಾಟಕಕ್ಕೆ `ಅಕ್ಕ' ಸಮ್ಮೇಳನದಿಂದಾದ ವ್ಯಾಪಾರೀಲಾಭ

ಬೆಂಗಳೂರು: ಇತ್ತೀಚೆಗೆ ಉಪಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ ವಾಣಿಜ್ಯ ಸಂಬಂಧ ಉತ್ತಮ ಪಡಿಸಿಕೊಳ್ಳುವ ಉದ್ದೇಶದಿಂದ ಅಮೇರಿಕಾದ ಕನ್ನಡ ಸಮೇಳನಕ್ಕೆ ಭೇಟಿ ನೀಡಿತ್ತು. ಅದರ ಫಲಶೃತಿಗಳನ್ನು ಶನಿವಾರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಪತ್ರಿಕಾಗೋಷ್ಠಿಯನ್ನು ಕರೆದು ವಿವರಿಸಿದರು.

ಫಲಶೃತಿಗಳು ಇಂತಿವೆ:

  • ಬೆಂಗಳೂರು-ಮೈಸೂರು ನಡುವೆ ೪೦೦ ಕೋಟಿ ರೂ. ವೆಚ್ಚದಲ್ಲಿ ಜೈವಿಕ ತಂತ್ರಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಲು ಅಮೇರಿಕಾದ ಜೆನೊಮಿಕ್ಸ್ ಸೆಲ್ಯೂಶನ್ ಸಂಸ್ಥೆ ಮುಂದೆ ಬಂದಿದೆ.

  • ಲಾಸ್ ಏಂಜಲೀಸ್ ಉದ್ಯಮಿಗಳ ಸಂಘಟನೆಯೊಂದು ಮೈಸೂರಿನಲ್ಲಿ ೨೦೦ ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಆಸಕ್ತಿ ತೋರಿದೆ.

  • ಶಿವಮೊಗ್ಗ ಅಥವಾ ಮಂಡ್ಯ ಜಿಲ್ಲೆಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಲಾಸ್ ಏಂಜಲೀಸ್‌ನ ಜೈವಿಕ ತಂತ್ರಜ್ಞರು ಆಲೋಚಿದ್ದಾರೆ.

  • ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನ `ಟಿಎಸ್‌ಎಂಸಿ ನಾರ್ಥ್ ಅಮೇರಿಕಾ' ಕಂಪೆನಿ ಸೆಮಿ ಕಂಡಕ್ಟರ್ ಸಮುಚ್ಛಯ ಸ್ಥಾಪಿಸಲು ಉದ್ದೇಶಿಸಿದೆ.

  • ರಾಜ್ಯ ಸರ್ಕಾರದ ಸಹಕಾರದೊಂದಿಗೆ ರಾಜ್ಯದ ಯಾವುದಾದರು ಎರಡು ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಇಂಟೆಲ್ ಕಂಪೆನಿ ಆಶಯ ವ್ಯಕ್ತ ಪಡಿಸಿದೆ.

  • ಲಾಸ್ ಏಂಜಲೀಸ್‌ನ ಬೆವರ್ಲಿ ಹಿಲ್ಸ್‌ನ ಪ್ರಖ್ಯಾತ ವೈದ್ಯ ಡಾ. ಕೃಷ್ಣ ಸುರಪನೇನಿ ಹಾಗೂ ಸಹೋದ್ಯೊಗಿಗಳು ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆಯ ಹತ್ತಿರ ಆರೋಗ್ಯ ನಗರವೊಂದನ್ನು ಸ್ಥಾಪಿಸಲು ಮುಂದೆ ಬಂದಿದ್ದಾರೆ.

  • ಮೆ.ಯುಸಿಎ ಗ್ಲೋಬಲ್ ಇಂಕ್ ಅಧ್ಯಕ್ಷ ಫೈಸಲ್ ಸಯ್ಯದ್ ಅವರು ವೈದ್ಯಕೀಯ ಉಪಕರಣಗಳ ತಯಾರಿಕಾ ಘಟಕ ಪ್ರಾರಂಭಿಸಲು ಇಚ್ಛೆ ವ್ಯಕ್ತ ಪಡಿಸಿದ್ದಾರೆ.

ಸದ್ಯಕ್ಕೆ ನಾಲ್ಕು ಕಂಪೆನಿಗಳು ಒಟ್ಟು ೨೦೦೦ ಕೋಟಿ ರೂ. ಬಂಡವಾಳ ಹೂಡಲಿವೆ. ವಿವಿಧ ಯೋಜನೆಗಳ ಬಗ್ಗೆ ಗಮನ ನೀಡಲು ಅಮೇರಿಕಾದಲ್ಲೇ ವಾಸಿಸುತ್ತಿರುವವರೊಬ್ಬರನ್ನು ಕೈಗಾರಿಕಾ ರಾಯಭಾರಿಯನ್ನಾಗಿ ನೇಮಕ ಮಾಡಲು ಚಿಂತನೆ ನಡೆದಿದೆ.

ಉಪಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಮಂತ್ರಣವನ್ನು ಒಪ್ಪಿ ನ್ಯೂಯಾರ್ಕ್ ಗವರ್ನರ್ ಜಾಜ್ ಪಟರೆ, ಮೇರಿಲ್ಯಾಂಡ್ ಗವರ್ನರ್ ರಾಬರ್ಟ್ ಎಲ್.ಎಹ್ಲೀಜ್, ಕ್ಯಾಲಿಫೋರ್ನಿಯಾ ಗವರ್ನರ್ ಮತ್ತು ಹಾಲಿವುಡ್ ನಟ ಕೂಡಾ ಆದ ಅರ್ನಾಲ್ಡ್ ಸ್ವಾರ್ಜನಗರ್ ಉನ್ನತ ಮಟ್ಟದ ನಿಯೋಗದೊಂದಿಗೆ ಈ ವರ್ಷದ ಕೊನೆಯಲ್ಲಿ ಬೆಂಗಳೂರಿಗೆ ಭೇಟಿ ನೀಡುವ ಸಂಭವವಿದೆ ಎಂದು ನಾಯ್ಡು ಸುದ್ದಿಗಾರರಿಗೆ ತಿಳಿಸಿದರು.

ಇನ್ನಷ್ಟು

ವಿಪತ್ತುಗಳ ದತ್ತಸಂಚಯ ತಯಾರಿಕೆಯಲ್ಲಿ ಇಸ್ರೋ

ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ

ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

ದಸರಾಕ್ಕೆ ಸಿಂಗಾರ ಗೊಂಡ ಮೈಸೂರು

ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ

ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ

ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ

ಮುಷರಫ್ ಜೊತೆ ಮಾತುಕತೆ

ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com