ಬಿಡಿಎ ದಿಂದ ೨೧ ಕೋಟಿ ಅಕ್ರಮ ಸ್ಥಳ ವಶ
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ ನಲ್ಲಿ
ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಸುಮಾರು ೨೧ ಕೋಟಿ. ರೂ ಬೆಲೆ
ಬಾಳುವ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡಿದೆ.
ಅಕ್ರಮವಾಗಿ ಕಟ್ಟಿರುವ ಗೋಡೆಗಳನ್ನು ಕೆಡವಲಾಯಿತು.
ಪೊಲೀಸ್ ಅಧೀಕ್ಷಕ ಎಚ್. ಎಸ್. ರೇವಣ್ಣ, ಪೂರ್ವ
ಭಾಗದ ಕಾರ್ಯನಿರ್ವಾಹಕ ಎಂಜಿನೀಯರ್ ವೀರುಪಾಕ್ಷಯ್ಯ,
ಸ್ಥಳೀಯ ಪೊಲೀಸರುಗಳ ಸಹಾಯದಿಂದ ಈ ಕಾರ್ಯಾಚರಣೆಯನ್ನು
ನಡೆಸಲಾಯಿತು.
ಕಿರಿಕ್: ಅಕ್ರಮವಾಗಿ ಮನೆ ಕಟ್ಟೊ ತನಕ
ಏನೂ ಮಾಡುತ್ತಿದ್ದರಂತೆ ಬಿಡಿಎ ಮಂದಿ
ಗಾಂಧೀನಗರಕ್ಕೆ ಮಲ್ಲಿಕಾ ಶೆರಾವತ್!!
ಬೆಂಗಳೂರು:
ಬಾಲಿವುಡ್‌ನ `ಸೆಕ್ಸಿ ಸಿಂಬಲ್
ಮಲ್ಲಿಕಾ ಶೆರಾವತ್‌ಳನ್ನು ನಿರ್ದೇಶಕ ಪ್ರೇಮ್ ತಮ್ಮ ಚಿತ್ರದ `ಐಟಮ್
ಹಾಡಿಗೆ ಹೆಜ್ಜೆಹಾಕಲು ಕರೆತರುತ್ತಿದ್ದಾರೆ. ಈ `ಹಾಟ್
ಹಾಡಿನ ಚಿತ್ರೀಕರಣ ಸೆಪ್ಟೆಂಬರ್ ೨೭ ರಂದು ನಡೆಯಲಿದೆ.
ಶೆರಾವತ್ ಈಗಾಗಲೇ ಕಮಲಾಹಾಸನ್ ಜೊತೆ `ದಶಾವತಾರಮ್
ಎನ್ನುವ ತಮಿಳು ಚಿತ್ರದಲ್ಲಿ ನೆಗೆಟಿವ್ ಪಾತ್ರವನ್ನು ಮಾಡುತ್ತಿದ್ದಾಳೆ.
ಪ್ರೇಮ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ `ಪ್ರೀತಿ ಏಕೆ ಭೂಮಿ
ಮೇಲಿದೆ ಚಿತ್ರದ ನಾಯಕಿಯಾಗಿ
ಬಾಲಿವುಡ್‌ನ ತಮನ್ನಾ ಆಯ್ಕೆಯಾಗಿದ್ದಾಳೆ.
ಕಿರಿಕ್: `ಕಿಸ್ಸಿಂಗ್‌ಕ್ವೀನ್ಬರಿ
ಐಟಮ್ ಸಾಂಗ್‌ಗೆ ಮಾತ್ರನಾ ಅಂದ್ರಂತೆ ಗಾಂಧೀನಗರದ ಮಂದಿ!
ತರೂರ್ ಸ್ಥಿತಿ ಡೋಲಾಯಮಾನ
ಅಮೇರಿಕಾ: ವಿಶ್ವ ಸಂಸ್ಥೆಯ
ಮಹಾಕಾರ್ಯದರ್ಶಿ ಹುದ್ದೆಗೆ ನಡೆದ ಔಪಚಾರಿಕ ಚುನಾವಣೆಯಲ್ಲಿ ಭಾರತದ
ಅಭ್ಯರ್ಥಿಯಾಗಿರುವ ಶಶಿ ತರೂರ್ ಎರಡನೆಯ ಸ್ಥಾನ ಗಳಿಸಿದ್ದಾರೆ.
೧೧ ಮತ ಗಳಿಸಿ ದಕ್ಷಿಣ ಕೊರಿಯಾದ ಬಾನ್ ಕಿ ಮೋನ್ ಮೊದಲ ಸ್ಥಾನದಲ್ಲಿದ್ದಾರೆ.
ಕಿರಿಕ್: ಎಲ್ಲಾ ರಾಜಕೀಯ ಕಂಡ್ರಿ. ತರೂರು
ಗೆದ್ದರೆ ತವರೂರಿಗೆ ಎನು ಲಾಭ ಅಂತಾರೇ ಕೆಲವರು
ಬರಲಿದೆ ಲಾಲೂ ಬಗ್ಗೆ ಮ್ಯಾನೇಜ್ ಮೆಂಟ್ ಪುಸ್ತಕ
ನವದೆಹಲಿ: ಅಹಮದಾಬಾದ್ ಐಐಎಂನ
ವಿದ್ಯಾರ್ಥಿಗಳಿಗೆ ಲಾಲೂ ಪಾಠ ಮಾಡಿದ್ದೆ ತಡ. ಐಐಎಂಗಳಲ್ಲಿ ಲಾಲೂ ಆಡಳಿತ
ವೈಖರಿ ಚರ್ಚೆಯ ವಸ್ತುವಾಗಿದೆ. ಮ್ಯಾನೇಜ್‌ಮೆಂಟ್ ಕುರಿತು
ಈಗಾಗಲೇ ೪೦ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿರುವ ಪ್ರಮೋದ್ ಬಾತ್ರ
ಲಾಲೂ ಆಡಳಿತ ವೈಖರಿ ಯನ್ನು ಕುರಿತು ಪುಸ್ತಕ ಬರೆಯುತ್ತಿದ್ದಾರೆ.
ಹತ್ತಿರದಿಂದ ಲಾಲೂ ಆಡಳಿತ ವೈಖರಿಯನ್ನು
ಅರಿಯಲು ರೈಲ್ವೇ ಸಚಿವ ಲಾಲೂ ಪ್ರಸಾದ್ ಜೊತೆ ಪ್ರವಾಸದಲ್ಲಿರುವ ಲೇಖಕ
ಪ್ರಮೋದ್ ಅಕ್ಟೋಬರ್ ನಲ್ಲಿ ಪುಸ್ತಕ ಹೊರಬರುವ ಸಾಧ್ಯತೆಯಿದೆ
ಎಂದಿದ್ದಾರೆ.
ಕಿರಿಕ್: ಪ್ರೋಪೆಸರ್ ಸಾಹೆಬ್ರೇ ಲಾಲೂ
ಆಡಳಿತ ಪಾಠದೊಂದಿಗೆ ಇತರ ಪಾಠಗಳನ್ನು ಕಲಿತಿರಾ ಜೋಕೆ
ಗೂಗಲ್ ಅರ್ಥ್ ಹೊಸ ರೂಪದಲ್ಲಿ ಬಂದಿದೆ
ಸ್ಯಾನ್ ಫ್ರಾನ್ಸಿಸ್ಕೋ: ೩ಡಿ ಮ್ಯಾಪಿಂಗ್
ತಂತ್ರಾಂಶಕ್ಕೆ ಇನ್ನಷ್ಟು ಮೆರಗನ್ನು ಗೂಗಲ್ ಸಂಸ್ಥೆ ನೀಡಿದೆ. ಹೊಸ
ಮಾದರಿಯಲ್ಲಿ ವಿಡಿಯೋ ಹಾಗೂ ಇನ್ನಿತರ ಹೆಚ್ಚಿನ ಸೌಲಭ್ಯವನ್ನು
ಒದಗಿಸಲಾಗಿದೆ.
ಗೂಗಲ್ ಅರ್ಥ್‌ನ ಹೊಸ ಆವೃತ್ತಿಯ ಮ್ಯಾಪಿಂಗ್
ತಂತ್ರಾಂಶ ಉಚಿತವಾಗಿ ಲಭ್ಯವಿದೆ. ಗೂಗಲ್‌ನ ಅಧಿಕೃತ ಅಂತರ್ಜಾಲ ತಾಣ
:
www.earth.google.com
ದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕಿರಿಕ್: ಇನ್ನು ಆಫೀಸ್ ನಲ್ಲಿ ಕುಳಿತು ನಿಮ್ಮ
ಮನೆ ಮೇಲೆ ಒಂದು ಕಣ್ಣಿಡಬಹುದು.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ
ವಿವೋಚನಾ ದಿನಕ್ಕೆ ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ
ಇಲ್ಲದಿದ್ರೂ ಕೋಲ ಕುಡಿಯಬಾರದು