ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಬೆಂಗಳೂರು: ಅರಣ್ಯ ಸಚಿವ ಚೆನ್ನಿಗಪ್ಪ ಲಂಚ
ಪಡೆದಿದ್ದಾರೆ ಎಂದು ಬಿಂಬಿಸುವ ಮೂರನೆಯ ಸಿ.ಡಿ ಯನ್ನು
ಗುರುವಾರ ಬಿಡುಗಡೆ ಮಾಡಲಾಗಿದೆ. ನಿಗೂಢ ರೀತಿಯಲ್ಲಿ ಸಿ.ಡಿ ಗಳು
ಪತ್ರಿಕಾಲಯಗಳಿಗೆ ತಲುಪಿವೆ.
ಸಿ.ಡಿಯಲ್ಲಿ ಚೆನ್ನಿಗಪ್ಪ ಕುಮಾರಸ್ವಾಮಿಗೆ ಬೈಯುವ
ಚಿತ್ರೀಕರಣವಿದೆ. ಆದರೆ ಕುಮಾರಸ್ವಾಮಿ ಎಂದರೆ ಮುಖ್ಯಮಂತ್ರಿಗಳೊ
ಅಥವಾ ಗಣಿಗಾರಿಕೆ ನಡೆಸುವ ಕುಮಾರಸ್ವಾಮಿಯೋ ಎಂದು
ಗೊತ್ತಾಗಿಲ್ಲ.
ಮಾತಿನ ಮಧ್ಯೆ ಬಹಳ ಅವಾಚ್ಯ ಶಬ್ದಗಳನ್ನು
ಬಳಸಿದ್ದರೂ ಯಾರೊಂದಿಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಎಂಬುದು
ಕೂಡಾ ಅಸ್ಪಷ್ಟವಾಗಿದೆ.
ಪ್ರತಿಕ್ರಿಯೆಗಳು:
`ನಾನು
ಸಿ.ಡಿ ಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಚೆನ್ನಿಗಪ್ಪ ಅವರನ್ನು
ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ
- ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ.
`ವಸ್ತುಸ್ಥಿತಿ ಅರಿಯದೆ ಪ್ರತಿಕ್ರಿಯಿಸಲಾರೆ. ಆದರೆ ಒಂದು ಮಾತಂತೂ ಸತ್ಯ, ಸಮ್ಮಿಶ್ರ
ಸರ್ಕಾರಕ್ಕೆ ಈ ಸಿ.ಡಿಗಳಿಂದ ಯಾವುದೇ ಅಪಾಯವಿಲ್ಲ-
ಉಪಮುಖ್ಯಮಂತ್ರಿ ಯಡಿಯೂರಪ್ಪ.
`ಸತ್ಯ
ತಿಳಿಯುವ ಮನಸ್ಸು ಸರ್ಕಾರಕ್ಕೆ ಇದ್ದರೆ ಸಿಬಿಐ ತನಿಖೆ ನಡೆಸಬೇಕು-ಕೆಪಿಸಿಸಿ
ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
ಇನ್ನಷ್ಟು
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ