೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ನ್ಯೂಯಾರ್ಕ್: ಅಮೇರಿಕಾ ಮೂಲದ
ಪ್ರಸಿದ್ಧ ಕಾರು ಕಂಪನಿಯಾದ ಫೋರ್ಡ್ ತನ್ನ ೭೫ ಸಾವಿರ ನೌಕರರನ್ನು
ಕೆಲಸದಿಂದ ವಜಾ ಮಾಡುವ ನಿರ್ಣಯ ಮಾಡಿದೆ.
ಜಪಾನ್ ಕಾರು ಕಂಪನಿಗಳೊಂದಿಗಿನ ಸ್ಪರ್ಧೆ, ಮತ್ತು
ಇಳಿಮುಖವಾಗುತ್ತಿರುವ ಬೇಡಿಕೆಯಿಂದಾದ ಆರ್ಥಿಕ ನಷ್ಟದಿಂದ ಈ ನಿರ್ಧಾರ
ಕೈಗೊಳ್ಳುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಫೋರ್ಡ್
ಕಂಪೆನಿಗೆ ೧೨ ಕೋಟಿ ಡಾಲರ್ ನಷ್ಟವಾಗಿತ್ತು. ಅಮೇರಿಕದಲ್ಲಿ ೧೪ ಕಾರ್ಖಾನೆಗಳಲ್ಲಿ
ಈಗಾಗಲೇ ೩೦ ಸಾವಿರ ನೌಕರರನ್ನು ವಿಶೇಷ ಕಾರಣಗಳಿಂದ ವಜಾ ಮಾಡಲಾಗಿದೆ.
ಇನ್ನಷ್ಟು
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'