ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ಬೆಂಗಳೂರು: ಭಾರತರತ್ನ ಸರ್ ಎಂ.
ವಿಶ್ವೇಶ್ವರಯ್ಯ ನವರ ೧೪೭ ನೇ ಹುಟ್ಟುಹಬ್ಬವನ್ನು ಇಂದು
ಆಚರಿಸಲಾಗುತ್ತಿದೆ.
ನಗರದ ವಿಶ್ವೇಶ್ವರಪುರ ಬಡಾವಣೆಯಲ್ಲಿರುವ
ಸಜ್ಜನ್‌ರಾವ್ ವೃತ್ತದ ಬಳಿ ನಡೆಯುವ ವಿಶ್ವೇಶ್ವರಯ್ಯನವರ ಜನ್ಮದಿನ
ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ವಿಶ್ವೇಶ್ವರಯ್ಯನವರ
ಪುತ್ಥಳಿಯನ್ನು ಶುಕ್ರವಾರ ಸಂಜೆ ೬ ಗಂಟೆಗೆ
ಅನಾವರಣಗೊಳಿಸಲಾಗುವುದು.
ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸಮರ್ಪಣ
ಸಾಂಸ್ಕೃತಿಕ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಈ
ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯಪಾಲ ಟಿ.ಎನ್. ಚತುರ್ವೇದಿ, ಗಾಂಧಿವಾದಿ
ಹಾಗೂ ರಾಜ್ಯ ಸಭಾ ಸದಸ್ಯರಾದ ನಿರ್ಮಲ ದೇಶಪಾಂಡೆ ಆಗಮಿಸಲಿದ್ದಾರೆ
ಎಂದು ಆಯೋಜಕರು ಹೇಳಿದರು.
ಅತ್ಯುತ್ತಮ ತಂತ್ರಜ್ಞರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ
ಜನ್ಮದಿನವನ್ನು `ಇಂಜಿನೀಯರ್‌ಗಳ ದಿನ'ವೆಂದು ಸೆಪ್ಟೆಂಬರ್ ೧೫
ರಂದು ಆಚರಿಸಲಾಗುತ್ತದೆ.
ಇನ್ನಷ್ಟು
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ