ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ
ಸ್ನಾತ್ತಕೋತ್ತರ ವಿಭಾಗವು ಇನ್ನೂ ಆರು ತಿಂಗಳಲ್ಲಿ ಡಿಎನ್‌ಎ ಸಂಶೋಧನಾ
ಕೇಂದ್ರವನ್ನು ಹೊಂದಲಿದೆ.
ಅನುವಂಶೀಯ ಕಾಯಿಲೆಗಳ ಕಾರಣ ಹಾಗೂ
ಅವುಗಳನ್ನು ತಡೆಗಟ್ಟುವ ಕ್ರಮದ ಬಗ್ಗೆ ಈ ಸಂಶೋಧನಾ
ಕೇಂದ್ರವು ಗಮನಹರಿಸಲಿದೆ. ಇನ್ನೂ ಆರು ತಿಂಗಳಲ್ಲಿ ಈ ಕೇಂದ್ರವು
ಕಾರ್ಯಾರಂಭ ಮಾಡಲಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಎ.
ಮುರಿಗೆಪ್ಪ ಹೇಳಿದ್ದಾರೆ.
ಸುಮಾರು ೩ ಕೋಟಿ ವೆಚ್ಚದ ಸಂಶೋಧನಾ
ಕೇಂದ್ರದ ಜೊತೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್
ಕಟ್ಟಲು ಸರ್ಕಾರದ ಆರ್ಥಿಕ ನೆರವು ಪಡೆಯಲಾಗುವುದು. ೬೫ ಲಕ್ಷ
ವೆಚ್ಚದ ಕಂಪ್ಯೂಟರ್ ಪ್ರಯೋಗಶಾಲೆ ಸ್ಥಾಪಿಸಲು ಯುಜಿಸಿಗೆ ಪ್ರಸ್ತಾಪ
ನೀಡಲಾಗಿದೆ. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬ್ಬಡಿ
ಪಂದ್ಯಾವಳಿಯನ್ನು ಸೆಪ್ಟೆಂಬರ್ ೨೭ ರಿಂದ ಅಕ್ಟೋಬರ್ ೧ ರವರೆಗೂ ವಿಶ್ವವಿದ್ಯಾಲಯದ
ಆವರಣದಲ್ಲಿ ನಡೆಸಲಾಗುವುದು ಎಂದು ಉಪಕುಲಪತಿ ಮುಗೆರಪ್ಪ
ಹೇಳಿದ್ದಾರೆ.
ಇನ್ನಷ್ಟು
೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'