ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಬೆಂಗಳೂರು: ಸಚಿವ ಚೆನ್ನಿಗಪ್ಪ ಲಂಚ
ಸ್ವೀಕರಿಸುವಂತೆ ಚಿತ್ರೀಕರಣವಿರುವ ಎರಡು ಸಿ.ಡಿ ಗಳನ್ನು ಪತ್ರಿಕಾ
ಕಚೇರಿಗಳಿಗೆ ತಲುಪಿಸಲಾಗಿದೆ. ಚೆನ್ನಿಗಪ್ಪ ಲಂಚ
ತೆಗೆದುಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಲಾಗದಂತೆ ಸಂಭಾಷಣೆ
ಮತ್ತು ಚಿತ್ರಗಳು ಅಸ್ಪಷ್ಟವಾಗಿವೆ. ಜನಾರ್ದನ ರೆಡ್ಡಿ ಕಡೆಯವರು
ಎನ್ನಲಾದ ವ್ಯಕ್ತಿಗಳು ಸಿ.ಡಿಗಳನ್ನು ಪತ್ರಿಕೆಗಳಿಗೆ ತಲುಪಿಸಿದ್ದಾರೆ.
ಆದರೆ ರೆಡ್ಡಿಯವರು ಅಧಿಕೃತವಾಗಿ ಸಿ.ಡಿಯನ್ನು ಬಿಡುಗಡೆಮಾಡಿದ್ದನ್ನು
ಎಲ್ಲೂ ಹೇಳಿಕೊಂಡಿಲ್ಲ.
ಈ ನಡುವೆ ರೆಡ್ಡಿ ಪರ ವಕೀಲ ಸಿ. ವಿ. ನಾಗೇಶ್‌ರವರು
ಗಣಿಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರವಿರುವ ಸಿ.ಡಿಗಳನ್ನು
ನ್ಯಾಯಾಲಯದಲ್ಲಿ ಮಂಡಿಸಲು ಬುಧವಾರ ಮನವಿ ಮಾಡಿಕೊಂಡರು.
ಆದರೆ ನ್ಯಾಯಾಲಯ ಈ ಹಂತದಲ್ಲಿ ಸಿ.ಡಿಯನ್ನು ಸ್ವೀಕರಿಸಲು
ನಿರಾಕರಿಸಿತು.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಚೆನ್ನಿಗಪ್ಪ `ಇದೆಲ್ಲ
ಆಧುನಿಕಯುಗದ ಮಾಯೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್
ಬೆಂಗಳೂರಿಗೆ ಬಂದಿದ್ದಾರೆ. ಕುಮಾರಕೃಪ ಅತಿಥಿ ಗೃಹದಲ್ಲಿ ರಾಜ್ಯದ
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್,
ಕಾಗೋಡು ತಿಮ್ಮಪ್ಪ ಮುಂತಾದವರೊಂದಿಗೆ ಸಮಾಲೋಚನೆ
ನಡೆಸಿದ್ದಾರೆ.
ಈ ಮಧ್ಯೆ ಸಿ.ಡಿ ಹಗರಣದ ಬಗ್ಗೆ ಮಾತನಾಡಿದ
ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ `ಸಚಿವ ಚೆನ್ನಿಗಪ್ಪರವರನ್ನು
ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ.
`ಸಮ್ಮಿಶ್ರ ಸರ್ಕಾರ ತನ್ನ ಅವಧಿಯನ್ನು ಪೂರೈಸುವುದು
ಇಂತಹ ಊಹಾ ಪೋಹಗಳನ್ನು ನಂಬುವಂತಿಲ್ಲ' ಎಂದು ಉಪ ಮುಖ್ಯ ಮಂತ್ರಿ
ಯಡಿಯೂರಪ್ಪ ಹೇಳಿದ್ದಾರೆ.
ಇನ್ನಷ್ಟು
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ