ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಬೆಂಗಳೂರು: ಬಾಗೇವಾಡಿ ಕ್ಷೇತ್ರದ ಬಿಜೆಪಿ
ವಿಧಾನಸಭಾ ಸದಸ್ಯ ಅಭಯ್ ಕುಮಾರ್ ಪಾಟೀಲರನ್ನು ಕರ್ನಾಟಕ
ರಕ್ಷಣಾ ವೇದಿಕೆ ಸದಸ್ಯರು ವಿಧಾನಸೌಧದ ಕೋಣೆಗೆ ಬೀಗ ಹಾಕಿದ
ಘಟನೆ ಬುಧವಾರ ನಡೆದಿದೆ.
ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ
೩೧೭ ನೇ ಸಂಖ್ಯೆಯ ಕೊಠಡಿಯ ಬಳಿ ಘೋಷಣೆಗಳನ್ನು ಕೂಗುತ್ತಾ
ಪಾಟೀಲರ ರಾಜಿನಾಮೆಗೆ ಒತ್ತಾಯಿಸಿದರು. ಇತ್ತೀಚಿಗೆ ನಡೆದ
ಬೆಳಗಾವಿ ತಾಲೂಕು ಪಂಚಾಯತ್ ಚುನಾವಣೆಯಲ್ಲಿ
ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿ ವಸಂತ್ ದುಕ್ರೆಗೆ ವಿಧಾನಸಭಾ
ಸದಸ್ಯ ಅಭಯಕುಮಾರ್ ಪಾಟೀಲರು ಬೆಂಬಲ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ
ಕರ್ನಾಟಕ ರಕ್ಷಣಾ ವೇದಿಕೆಯು ಅಭಯಕುಮಾರ್ ರಾಜೀನಾಮೆಗೆ
ಒತ್ತಾಯಿಸಿದೆ.
ಆದರೆ ಅಭಯ್ ಕುಮಾರ್ ಘಟನೆ ನಡೆದಾಗ
ಕೊಠಡಿಯಲ್ಲಿರಲಿಲ್ಲವೆಂದು ಹೇಳಲಾಗಿದೆ.
(ಚಿತ್ರ ಕೃಪೆ: ಈ ಸಂಜೆ)
ಇನ್ನಷ್ಟು
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ