ಬೆಂ.ಮ.ನ ಪಾಲಿಕೆಯಲ್ಲಿ ನಗರ ಸಭೆಗಳ ವಿಲೀನ
ಬೆಂಗಳೂರು: ಬೆಂಗಳೂರು ಸುತ್ತಮತ್ತಲಿರುವ
ಏಳು ನಗರ ಸಭೆ ಮತ್ತು ೧೦೬ ಹಳ್ಳಿಗಳನ್ನು ಬೆಂಗಳೂರು ಮಹಾನಗರ
ಪಾಲಿಕೆಯಲ್ಲಿ ವಿಲೀನಗೊಳಿಸಲು ಬುಧವಾರ ನಡೆದ ಸಭೆಯಲ್ಲಿ ರಾಜ್ಯ
ಕ್ಯಾಬಿನೇಟ್ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿಗಳು ಚುನಾಯಿತ ಪ್ರತಿನಿಧಿಗಳ
ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅನೇಕ ಸುತ್ತಿನ ಮಾತುಕತೆ
ನಡೆಸಿ ನವೆಂಬರ್ ೧ ರ ಒಳಗೆ ಸರಿಯಾದ ನಿರ್ಧಾರಕ್ಕೆ ಬರುವ ಭರವಸೆ
ನೀಡಿದ್ದಾರೆ.
ಕ್ಯಾಬಿನೇಟ್ ಸಭೆಯ ನಂತರ ಮಾತನಾಡಿದ
ರಾಜ್ಯ ಗೃಹ ಸಚಿವ ಎಮ್. ಪಿ. ಪ್ರಕಾಶ್ `ಸದ್ಯ ಇರುವ ಬೆಂಗಳೂರು
ನಗರಕ್ಕೆ ಈ ಯೋಜನೆಯಿಂದ ಇನ್ನೂ ಹೆಚ್ಚಿನ ಉಪಯೋಗವಾಗಲಿದೆ
ಎಂದು ಹೇಳಿದರು.
ದಾಸರಹಳ್ಳಿ, ಬ್ಯಾಟರಾಯನಪುರ, ಮಹದೇವಪುರ,
ಬೊಮ್ಮನಹಳ್ಳಿ, ಯಲಹಂಕ, ಕೃಷ್ಣರಾಜಪುರ ಮತ್ತು ರಾಜರಾಜೇಶ್ವರಿನಗರ
ಪುರ ಸಭೆ ಹಾಗೂ ಕೆಂಗೇರಿ ನಗರಸಭೆ ಈ ಯೋಜನೆಗೆ ಸೇರಿವೆ.
ಅನೇಕಲ್, ಹೊಸಕೋಟೆ, ಮಾಗಡಿ, ಮಾಲೂರು
ಮತ್ತು ಕನಕಪುರದ ಟೌನ್‌ಶಿಪ್‌ಗಾಗಿ ಯೋಜನೆ ತಯಾರಿಸಲು
ಬೆಂಗಳೂರು ಮಹಾನಗರ ಅಭಿವೃದ್ಧಿ ಇಲಾಖೆ(ಬಿಎಂಆರ್‌ಡಿಎ) ಯೋಜಿಸಿದೆ.
ಇನ್ನಷ್ಟು
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ