ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಬೆಂಗಳೂರು: ಸ್ವಯಂಚಾಲಿತ ಮಾರ್ಗದರ್ಶಕ(ಆಟೋಮೆಟಡ್
ಟುಟರ್) ವನ್ನು ಕಾರ್ನಿಕೆ ಮೆಲ್ಲಾನ್ ವಿಶ್ವವಿದ್ಯಾಲಯ ನಿರ್ಮಿಸಿದೆ.
ಅಂಧರು ಆಂಗ್ಲ ಭಾಷೆಯ ವರ್ಣಮಾಲೆಯನ್ನು
ಕಲಿಯಬೇಕಾದರೆ ಸಾಮಾನ್ಯವಾಗಿರುವ ೨೬ ಅಕ್ಷರಗಳ ಜೊತೆಗೆ
ಕೆಲವು ಚಿತ್ರಗಳನ್ನು ರಚಿಸಿ ಒಟ್ಟು ೫೨ ಅಕ್ಷರಗಳನ್ನು ಕಲಿಯಬೇಕಾಗುತ್ತಿತ್ತು.
ಬ್ರೈಲ್ ಲಿಪಿಯಲ್ಲಿನ ಈ ರೀತಿಯ ಕೆಲ ನ್ಯೂನತೆಗಳಿಂದ ಅಂಧ
ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು ಎಂದು ಕಾರ್ನಿಗೆ ಮೆಲ್ಲಾನ್ ವಿಶ್ವವಿದ್ಯಾಲಯದ
ಸ್ನಾತಕೋತ್ತರ ವಿದ್ಯಾರ್ಥಿನಿ ನಿಧಿಕಾರ್ಲ ಹೇಳಿದ್ದಾರೆ.
ನಿಧಿಕಾರ್ಲ ತನ್ನ ಸಹಪಾಠಿಗಳೊಂದಿಗೆ ನಿರ್ಮಿಸುತ್ತಿರುವ
ಮಾರ್ಗದರ್ಶಕದಿಂದ ಬ್ರೈಲ್ ಲಿಪಿಯನ್ನು ಸುಲಭವಾಗಿ ಓದಲು ಹಾಗೂ
ಬರೆಯಲು ಸಾಧ್ಯವಾಗಲಿದೆ. ಬೆಂಗಳೂರಿನ ಮಾತೃ ಅಂಧ ಶಾಲೆಗೆ ಈ
ಸೌಲಭ್ಯವು ಲಭ್ಯವಾಗಲಿದೆ. ಈ ಯಂತ್ರ ಸೌಲಭ್ಯದಲ್ಲಿ ಒಂದು
ಇಲೆಕ್ಟ್ರಾನಿಕ್ ಸ್ಲೇಟ್ ಹೊಂದಿದೆ. ಇದರಲ್ಲಿ ಬರೆದಿದ್ದು ಗಣಕಕ್ಕೆ
ಅನುವಾದಗೊಳ್ಳುತ್ತದೆ. ಮಾತು-ಅಕ್ಷರಗಳ ಸಂಯೋಜಕ ಉಪಕರಣವನ್ನು
ಅಳವಡಿಸುವುದರ ಮೂಲಕ ಬೇರೆ ಬೇರೆ ಭಾಷೆಗಳನ್ನು ಯಂತ್ರ
ಗ್ರಹಿಸಲು ಸಾಧ್ಯವಾಗಲಿದೆ ಎಂದು ನಿಧಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಈ
ಯಂತ್ರವು ಕೇವಲ ೮೦೦ ರೂಪಾಯಿಗೆ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ:
www.cs.cmu.edu/
www.brailletutor.blogspot.com,
ಶಾಲೆ ವಿಳಾಸ: ಮಾತೃ ಅಂಧ ಶಾಲೆ, ನಂ
೧೪, ೫ನೇ `ಎ ಅಡ್ಡರಸ್ತೆ,
ಯಲಹಂಕ ನ್ಯೂ ಟೌನ್, ಬೆಂಗಳೂರು-೫೬೦ ೦೬೪.
ಇನ್ನಷ್ಟು
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ