Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 12 September 2006 07:01 PM

ತುಣುಕು ಸುದ್ದಿಗಳು

ತಸ್ಲೀಮಾ ನಸ್ರೀನ್‌ರಿಂದ ಭಾರತೀಯ ಪೌರತ್ವಕ್ಕೆ ಕೋರಿಕೆ

ಕೋಲ್ಕತ್ತಾ: ಮೂಲಭೂತವಾದಿಗಳ ಬೆದರಿಕೆಯಿಂದ ತಾಯಿನೆಲ ಬಿಟ್ಟು ಬಂದಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಭಾರತೀಯ ಪೌರತ್ವ ಅಥವಾ ಖಾಯಂ ನಿವಾಸ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ.

ತಸ್ಲೀಮಾ ನಸ್ರೀನ್ ಅವರ `ಲಜ್ಜಾ' ಮತ್ತಿತರ ಕೃತಿಗಳನ್ನು ಬಾಂಗ್ಲಾದೇಶದ ಸರ್ಕಾರ ನಿಷೇಧಿಸಿದೆ. ಸದ್ಯ ಅವರು `ಆಮೀ ಭಲೋ ನಾಯೀ, ತುಮೀ ಭಲೋ ತೇಕೊ ಪ್ರಿಯಾ ದೇಶ್' (ನಾನು ಕ್ಷೇಮವಾಗಿಲ್ಲ, ಆದರೆ ನನ್ನ ಮಾತೃಭೂಮಿ ಸದಾ ಕ್ಷೇಮವಾಗಿರಲಿ) ಎನ್ನುವ ಆತ್ಮ ಚರಿತ್ರೆ ಬರೆಯುವ ಸಿದ್ಧತೆಯಲ್ಲಿದ್ದಾರೆ.

ಕಿರಿಕ್: ಬುದ್ಧಿವಂತರಿಗೆ ಇದು ಕಾಲವಲ್ಲ, ಆದರೆ ಬುದ್ಧಿ ಇರೋರು ಹೇಗೋ ಬದುಕುತ್ತಾರೆ ಬಿಡಿ

 

ಇಂಟರ್‌ನೆಟ್‌ನಲ್ಲಿ ಶಾಲೆಗಳ ಸ್ಥಿತಿಗತಿಯ ಮಾಹಿತಿ

ನವದೆಹಲಿ: ಈಗ ವಿದ್ಯಾರ್ಥಿಗಳು ತಾವು ಸೇರಬಯಸಿದ ಶಾಲೆಗಳ ಮಾಹಿತಿಯನ್ನು ಇಂಟರ್‌ನೆಟ್‌ನಲ್ಲೇ ಪಡೆಯಬಹುದಾಗಿದೆ. ಹತ್ತುಲಕ್ಷಕ್ಕೂ ಹೆಚ್ಚಿನ ಶಾಲೆಗಳ ಮಾಹಿತಿಯನ್ನು ಇದು ಒಳಗೊಂಡಿದ್ದು ಎರಡು ಪುಟಗಳಲ್ಲಿ ಪ್ರತಿ ಶಾಲೆಯ ಮಾಹಿತಿ ಇರುತ್ತದೆ. www.schoolreportcards.in ವೆಬ್‌ಸೈಟ್ ನಲ್ಲಿ ಶಾಲೆಗಳ ಸಾಧನೆ ಬಗ್ಗೆ ಮಾಹಿತಿ ದೊರೆಯುತ್ತದೆ.

ಕಿರಿಕ್: ಕಂಪ್ಯೂಟರ್ ನೋಡಿ ಶಾಲೆಗೆ ಸೇರಿಸೋ ಕಾಲ ಬಂತಲ್ಲಪ್ಪಾ ಶಿವನೇ!

 

ದಸರಾ ಕುಸ್ತಿ ಉಪಸಮಿತಿ ಸಭೆಯಿಂದಲೇ ಪ್ರಾರಂಭ!?

ಮೈಸೂರು: ದಸರಾ ಉಪಸಮಿತಿಯ ಅಧ್ಯಕ್ಷರನ್ನಾಗಿ ತಮ್ಮ ಜನರನ್ನೇ ನೇಮಿಸಬೇಕೆನ್ನುವ ವಿಷಯಕ್ಕಾಗಿ ಸಚಿವ ಡಿ. ಟಿ. ಜಯಕುಮಾರ್ ಮತ್ತು ಶಾಸಕ ಜಿ. ಟಿ. ದೇವೇಗೌಡರ ನಡುವೆ ವಾಗ್ವಾದವಾಗಿ ಕತ್ತಿನ ಪಟ್ಟಿ ಹಿಡಿಯುವ ತನಕ ಹೋಯಿತ್ತಂತೆ.

ದಸರಾ ಸಂಬಂಧದ ಸಭೆಯಲ್ಲಿ ಈ ಮಾರಾಮಾರಿ ನಡೆದಿದ್ದು ಉಭಯ ಗುಂಪಿನವರ ನಡುವೆ ಬೈದಾಟ-ತಳ್ಳಾಟ ನಡೆದು ತಮ್ಮಷ್ಟಕ್ಕೆ ತಾವೇ ಸುಮ್ಮನಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಿರಕ್: ಈ ದಸರಾದಲ್ಲಿ ಸಚಿವರು ಅಖಾಡದಲ್ಲಿ ಕುಸ್ತಿ ಆಡುತ್ತಾರಂತೆ

 

ವಿಲಾಸ್‌ರಾವ್‌ಗೆ ವಿದ್ಯುತ್ ಕಟ್ಟಾ?

ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ತಮ್ಮ ಅಧಿಕೃತ ನಿವಾಸವಾದ `ರಾಮ್ ಗಿರಿ'ಯ ವಿದ್ಯುತ್ ಹಣವನ್ನು ಪಾವತಿಸದ ಕಾರಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರಿ ಅಧಿಕಾರಿಗಳ ಬಾಕಿ ವಿದ್ಯುತ್ ಬಾಕಿ ೪೫ ಲಕ್ಷವಿದ್ದು ಮುಖ್ಯಮಂತ್ರಿಗಳದ್ದು ೧.೨ ಲಕ್ಷ ಬಾಕಿ ಇದೆ.

ಕಿರಿಕ್: ಸರಿ ಕರೆಂಟ್ ಬರೋ ತನಕ ಕತ್ತಲೆಯಲ್ಲಿ ಕುತಿರಿ ಗೊತ್ತಾಗೊತ್ತೇ ಕಷ್ಟ!

 

ಅರಮನೆ ಹತ್ತಿರ ಬೇರೆ ಮನೆ ಕಟ್ಟಿದರೆ ಜೋಕೆ

ಬೆಂಗಳೂರು: ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರವು ಬೆಂಗಳೂರು ಅರಮನೆ ಆವರಣದಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿ ಕೆಲಸವನ್ನು ತಡೆಯಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಆಜ್ಞೆಯನ್ನು ಜಾರಿ ತರುವ ಪ್ರಯತ್ನ ಇದಾಗಿದೆ ಎಂದು ಸೋಮವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಪತ್ರಿಕೆ ಸುತ್ತೋಲೆಯಲ್ಲಿ ಹೇಳಿದೆ.  ಕೋರ್ಟ್ ಆದೇಶ ಉಲ್ಲಂಘನೆ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶದ ದುರುಪಯೋಗ ಮಾಡಿರುವ ವಿರುದ್ಧ ಈಗಾಗಲೇ ೧೦ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಕಿರಿಕ್: ಅರಮನೆ ಹತ್ರಾ ಮನೆಕಟ್ಟಿದ್ರೆ ಸೆರೆಮನೆಗೆ ಕಳುಸ್ತಾರಾ!.

 

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com