ಶೀಘ್ರದಲ್ಲೇ ಕನ್ನಡಕ್ಕೆ ಹೊಸ ನ್ಯೂಸ್ ಚಾನೆಲ್: ಟಿವಿ-೯
ಮುಂಬಯಿ:
ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ಟಿವಿ-೯, ಐ ಲ್ಯಾಬ್ಸ್ ಹಣ ಹೂಡಿಕೆಯೊಂದಿಗೆ
ಹಾಗೂ ಚೆನ್ನೈ ಮೂಲದ ಯುನಿಫೈ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆ
ಸಹಕಾರದೊಂದಿಗೆ ಕನ್ನಡದಲ್ಲಿ ನ್ಯೂಸ್ ವಾಹಿನಿಯೊಂದನ್ನು ಪ್ರಾರಂಭಿಸಲಿದ್ದಾರೆ.
`ಸೆಪ್ಟೆಂಬರ್ ಕೊನೆವಾರ ಅಥವಾ ಅಕ್ಟೋಬರ್ ತಿಂಗಳಲ್ಲಿ ನ್ಯೂಸ್ ಚಾನೆಲ್
ಪ್ರಸಾರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಿದೆ. ಟಿವಿ-೯ ತೆಲುಗು ವಾರ್ತಾ
ವಾಹಿನಿ ಈಗಾಗಲೇ ಚಾಲನೆಯಲ್ಲಿದೆ'
ಎಂದು ಟಿವಿ-೯ ಕನ್ನಡ ಚಾನೆಲ್‌ನ ನಿರ್ದೇಶಕ ಮಹೇಂದ್ರ ಮಿಶ್ರಾ
ಹೇಳಿದ್ದಾರೆ.
`ಈಗಿರುವ
ಚಾನೆಲ್‌ಗಳೊಡನೆ ಸ್ಫರ್ಧಿಸುವುದು ನಮ್ಮ ಉದ್ದೇಶವಲ್ಲ, ಕನ್ನಡದಲ್ಲಿ
ಸುದ್ದಿಯನ್ನು ಸಮಗ್ರವಾಗಿ ನೀಡುವುದು. ಸ್ಥಳೀಯ ಸುದ್ದಿಗಳ
ಜೊತೆಗೆ ದೇಶ-ವಿದೇಶ ಸುದ್ದಿಗಳನ್ನು ಪ್ರಸಾರಮಾಡಲಾಗುವುದು.
ಎಲ್ಲ ಬಗೆಯ ಜನರ ಸಮಸ್ಯೆಗಳ ನೈಜ ಚಿತ್ರಣ ನೀಡಲಾಗುವುದು'
ಎಂದು ಮಹೇಂದ್ರ ಮಿಶ್ರಾ ಹೇಳಿದ್ದಾರೆ.
ಕಸ್ತೂರಿ ಮೀಡಿಯಾ ಪ್ರೈ.ಲಿ ಹೊರತರುತ್ತಿರುವ ಕನ್ನಡ ಕಸ್ತೂರಿ
ಕನ್ನಡವಾಹಿನಿ ನವೆಂಬರ್‌ಗೆ ಉದ್ಘಾಟನೆಯಾಗುವ ಸಾಧ್ಯತೆಯಿರುವುದರಿಂದ.
ಟಿವಿ-೯ ನ್ಯೂಸ್ ವಾಹಿನಿಯನ್ನು ಶೀಘ್ರದಲ್ಲೇ ಪ್ರಸಾರಕ್ಕೆ ಸಿದ್ಧವಾಗಲಿದೆ
ಎಂದು ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು