Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 September 2006 06:09 PM

ಡಿ.೨ ರಿಂದ ಮುಂಬೈನಲ್ಲಿ ಕನ್ನಡ ಕಂಪು

ನವದೆಹಲಿ: ೧೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಡಿಸೆಂಬರ್ ೨ ಮತ್ತು ೩ ರಂದು ಮುಂಬೈನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ದೆಹಲಿ ಕನ್ನಡಿಗ ಪತ್ರಿಕೆಯ ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ. ಗಮನೀಯ ಸೇವೆ ಸಲ್ಲಿಸಿದ ಕನ್ನಡಿಗರನ್ನು ಸಮ್ಮೇಳನದಲ್ಲಿ ಗೌರವಿಸಲಾಗುವುದು ಎಂದು ಸಮ್ಮೇಳನದ ಸಂಚಾಲಕ ಬಾ. ಸಾಮಗ ತಿಳಿಸಿದ್ದಾರೆ.

ಕಿರಿಕ್: ಈ ಕಡೆ ಗಡಿವಿವಾದ ಆ ಕಡೆಯಿಂದ ಕಸ್ತೂರಿ ಪರಿಮಳ

ಸ್ವಯಂ ನಿವೃತ್ತಿ ನೌಕರರ ಹಕ್ಕಲ್ಲ!

ನವದೆಹಲಿ: ಸ್ವಯಂ ನಿವೃತ್ತಿ ಪಡೆಯುವುದು ತನ್ನ ಹಕ್ಕು ಎಂದು ಯಾವುದೇ ನೌಕರ ಪ್ರತಿಪಾದಿಸುವಂತಿಲ್ಲ. ನೌಕರನ ಸ್ವಯಂ ನಿವೃತ್ತಿ ಮನವಿಯನ್ನು ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳುವ ಹಕ್ಕು ಸಂಸ್ಥೆಯ ಮಾಲೀಕನಿಗೆ ಸೇರಿದ್ದು ಎಂದು ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಕಿರಿಕ್: ಕೆಲಸ ಸಿಗೋದೆ ಕಷ್ಟ, ನಮ್ಮಿಚ್ಛೆಯಂತೆ ಕೆಲಸ ಬಿಡೋಕು ತೊಂದರೆನಾ!

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ

ನವದೆಹಲಿ: ಭಾರತದಲ್ಲಿ ಹೃದಯಾಘಾತದ ಸಮಸ್ಯೆ ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿರದೆ, ಯುವಕರಲ್ಲಿಯೂ ಹೆಚ್ಚುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು ೮೦ ಲಕ್ಷ ಮಂದಿ ೪೦ ವರ್ಷ ಒಳಗಿನವರು ಇದಕ್ಕೆ ತುತ್ತಾಗುತ್ತಿದ್ದಾರೆ.

ವಿಚಿತ್ರವೆಂದರೆ ವಾಣಿಜ್ಯ ಚಟುವಟಿಕೆ ಕೇಂದ್ರವಾದ ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಪ್ರಮಾಣ ಕಡಿಮೆ ಇದೆ. ಕಚೇರಿಗಳಲ್ಲಿ ಹೆಚ್ಚುತ್ತಿರುವ ಒತ್ತಡ, ಧೂಮಪಾನ, ಹೃದಯ ಸಂಬಂಧಿ ಸಮಸ್ಯೆ ಹೆಚ್ಚಲು ಕಾರಣವಾಗಿದೆ ಎಂದು ವೈದ್ಯರುಗಳು ಹೇಳುತ್ತಾರೆ.

ಕಿರಿಕ್: ಹೃದಯ ಇದ್ದವರಿಗೆ ತಾನೆ ಹೃದಯಾಘಾತ ಆಗೋದು

೧, ೨೦೦ ಸದಸ್ಯರ ಅವಿಭಕ್ತ ಕುಟುಂಬ

ಆಗ್ರಾ: ಸುಮಾರು ೩೫೦ ವರ್ಷಗಳ ಇತಿಹಾಸವಿರುವ ಅವಿಭಕ್ತ ಕುಟುಂಬವೊಂದು ಅನ್ಯೋನ್ಯತೆಯಿಂದ ಬಾಳುತ್ತಿದೆ. ೧, ೨೦೦ ಸದಸ್ಯರನ್ನು ಹೊಂದಿರುವ ಈ ಕುಟುಂಬದವರು ಆಗ್ರಾದಿಂದ ಅಂಡಮಾನ್ ನಿಕೊಬಾರ್ ದ್ವೀಪದ ತನಕವೂ ಇದ್ದಾರೆ. ಉದ್ಯೋಗದ ನಿಮಿತ್ತ ಬೇರೆ ಬೇರೆ ಕಡೆ ಇದ್ದರೂ ವರ್ಷಕ್ಕೊಮ್ಮೆ ಸೇರುತ್ತಾರೆ. ಈ ಕುಟುಂಬದ ಅತ್ಯಂತ ಹಿರಿಯನ ವಯಸ್ಸು ೯೫ ಆಗಿದ್ದರೆ, ಅತಿ ಕಿರಿ ಸದಸ್ಯನ ವಯಸ್ಸು ನಾಲ್ಕು ತಿಂಗಳುಗಳಾಗಿವೆ.

ಕಿರಿಕ್: ಫಾಮಿಲಿ ಪ್ಲಾನಿಂಗ್ ಅಂದ್ರೆ ಗೊತ್ತಾ ಇವರಿಗೆ ಕೇಳಿ ನೋಡಿ

ಸತ್ಯಾಗ್ರಹಕ್ಕೂ ನೂರುವರ್ಷ

ನವದೆಹಲಿ: ವಂದೆ ಮಾತರಂ ಗೆ ನೂರುವರ್ಷ ತುಂಬಿದ ಹಿನ್ನಲೆಯಲ್ಲೇ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿದ ಸತ್ಯಾಗ್ರಹಕ್ಕೂ ನೂರು ವರ್ಷ ತುಂಬಿದೆ. ದೇಶದೆಲ್ಲೆಡೆ ಇದನ್ನು ಸ್ಮರಿಸಲಾಯಿತು.

ಕಾಂಗ್ರೇಸ್ ವರಿಷ್ಟರು ಸಭೆ ಸೇರಿ ಗಾಂಧೀಜಿಯವರು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿ ಹಿಡಿಯುವ ತನ್ನ ಸಂಕಲ್ಪವನ್ನು ಪುನಃ ಹೇಳಿತು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೆದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com