ಸೆ.೩೦ ರಂದು ಕರ್ನಾಟಕ ಬಂದ್
ಬೆಂಗಳೂರು: ಕೇಂದ್ರ ಸರ್ಕಾರವು ಕರ್ನಾಟಕ
ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ
ಸಲ್ಲಿಸಿದ್ದ ಪ್ರಮಾಣಪತ್ರವನ್ನು ಹಿಂದಕ್ಕೆ ಪಡೆದಿದ್ದನ್ನು ವಿರೋಧಿಸಿ
ಕನ್ನಡ ಸಂಘಟನೆಗಳು ಸೆಪ್ಟೆಂಬರ್ ೩೦ ಕ್ಕೆ ಕರ್ನಾಟಕ ಬಂದ್‌ಗೆ ಕರೆ
ನೀಡಿವೆ.
`ನಾವು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ
ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಮಹಾಜನ್ ಸಮಿತಿಯ ವರದಿಯನ್ನು
ಜಾರಿ ತರಲು ಕೇಂದ್ರಕ್ಕೆ ಒತ್ತಾಯಿಸುವಂತೆ ಹೇಳಲಿದ್ದೇವೆ. ಈ ವಿಷಯದಲ್ಲಿ
ಕಾಂಗ್ರೆಸ್ ಪಕ್ಷ ಮತ್ತು ಪಕ್ಷೇತರ ವಿಧಾನ ಸಭಾ ಸದಸ್ಯರ ಬೆಂಬಲ
ನಿರೀಕ್ಷಿಸುತ್ತೇವೆ ಎಂದು
ಕನ್ನಡ ಸಂಘಟನೆಗಳ ಸಭೆಯಲ್ಲಿ ವಾಟಾಳ್ ನಾಗರಾಜ್ ಹೇಳಿದರು.
ಮಹಾರಾಷ್ಟ್ರವು ನಲವತ್ತು ವರ್ಷಗಳ ಹಿಂದಿನ
ವಿವಾದವನ್ನು ಪದೇ ಪದೇ ಕೆದಕುತ್ತಿರುವುದಕ್ಕೆ ಸಭೆಯು ವಿರೋಧ
ವ್ಯಕ್ತ ಪಡಿಸಿತು. ಶಾಸಕ ಭವನದಲ್ಲಿ ನಡೆದ ಈ ಸಭೆಯಲ್ಲಿ
ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರರಾದ ಸಾ.ರಾ. ಗೋವಿಂದು, ಪ್ರವೀಣ್‌ಕುಮಾರ್
ಶೆಟ್ಟಿ, ಮಾಜಿ ಶಾಸಕ ಪ್ರಭಾಕರ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಮುಂತಾದವರು
ಉಪಸ್ಥಿತರಿದ್ದರು. ಸಭೆಯು ವಾಟಾಳ್ ನಾಗರಾಜ್ ನೇತೃತ್ವದಲ್ಲಿ `ಗಡಿ
ಆಂದೋಲನ ಸಮಿತಿ ಯನ್ನು
ರಚಿಸಿದೆ.
ಇನ್ನಷ್ಟು
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್
ಬಿಜಾಪುರ ರೈತರಿಂದ ಅನಿರ್ಧಿಷ್ಟ ಅವಧಿ ಉಪವಾಸ
ಮಲೆಗಾಂವ್ ಸ್ಪೋಟ: ಒಬ್ಬನ ಬಂಧನ
ಯುವದಸರಾ ಮೇಳದ ಆಕರ್ಷಣೆಗಳು
ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ