ಮಲೆಗಾಂವ್
ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಶನಿವಾರ ಬೆಳಗ್ಗೆ ಪರಿಸ್ಥಿತಿ ಶಾಂತ, ಕರ್ಫ್ಯೂ ಮುಂದುವರಿಕೆ
ಮಲೆಗಾಂವ್ : ಶುಕ್ರವಾರ ರಾತ್ರಿ ಮಲೆಗಾಂವ್‌ನಲ್ಲಿ
ನಡೆದ ಸರಣಿ ಬಾಂಬ್‌ಸ್ಫೋಟದಲ್ಲಿ ಕನಿಷ್ಠ ೩೮ ಮಂದಿ ಸಾವನ್ನಪ್ಪಿದ್ದು
೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೋಮುಗಲಭೆಗೆ ಹೆಸರಾಗಿರುವ ಮಲೆಗಾಂವ್
ಜವಳಿ ನಗರವೆಂದು ಗುರುತಿಸಿಕೊಂಡಿದೆ. ಮಲೆಗಾಂವ್‌ನ ಮಸೀದಿಗೆ ಸಮೀಪವಿರುವ
ಬಡಾ ಖಬರ್‌ಸ್ಥಾನ್, ಮುಶೈರಾ ಚೌಕದಲ್ಲಿರುವ ಬೀಫ್ ಮಾರುಕಟ್ಟೆ ಮತ್ತು
ಆಯೇಷಾ ನಗರದಲ್ಲಿ ಮೂರು ಬಾಂಬ್‌ಗಳು ಕೆಲವೇ ನಿಮಿಷಗಳ
ಅಂತರದಲ್ಲಿ ಸ್ಫೋಟಗೊಂಡಿತು.
ಸೆ. ೮ರ ಶುಕ್ರವಾರ ಮುಸ್ಲಿಮರಿಗೆ ಶಬ್ಬೇ
ರಾತ್ ಪವಿತ್ರ ದಿನವಾಗಿತ್ತು. ಬಾಂಬ್ ಸ್ಫೋಟದಿಂದ ಕೆರಳಿದ ಸ್ಥಳೀಯ
ಜನರು ಇತರ ವಾಹನಗಳಿಗೆ ಕಲ್ಲು ತೂರಿ, ಅಂಗಡಿ ಮುಂಗಟ್ಟುಗಳನ್ನು
ಧ್ವಂಸ ಮಾಡಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳಗಳೂ ಘಟನೆ ನಡೆದ
ಸ್ಥಳ ಪ್ರವೇಶಿಸಲು ಪ್ರಯಾಸಪಡಬೇಕಾಯಿತು.
ಸೂಕ್ಷ್ಮ ಪ್ರದೇಶವೆಂದು
ಗುರುತಿಸಿಕೊಂಡಿರುವ ಮಲೆಗಾಂವ್‌ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಶನಿವಾರ ಬೆಳಗಿನ ವೇಳೆಗೆ ಪರಿಸ್ಥಿತಿ ಶಾಂತವಾಗಿತ್ತು.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ