Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 09 September 2006 11:08 AM

ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ

ಬೆಂಗಳೂರು: ಎಸ್ಸೆಸೆಲ್ಸಿಯಲ್ಲಿ ವಿಜ್ಞಾನ ವಿಷಯಕ್ಕಾಗಿ ವಿದ್ಯಾರ್ಥಿಗಳು ಎರಡು ಪರೀಕ್ಷೆಗಳನ್ನು ಈ ವರೆಗೆ ಬರೆಯಬೇಕಾಗಿತ್ತು. ಆದರೆ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ಇನ್ನು ಮುಂದೆ ಒಂದೇ ಪರೀಕ್ಷೆಯನ್ನು ನಡೆಸಲಿದೆ.

ಇದರ ಜೊತೆಗೆ ಭಾಷಾ ವಿಷಯದ ಪರೀಕ್ಷೆಯಲ್ಲಿ ಶೇ. ೪೦ ರಷ್ಟು ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಉತ್ತರಗಳು ಹಾಗೂ ಶೇ. ೬೦ರಷ್ಟು ಪ್ರಶ್ನೆಗಳಿಗೆ ಪ್ರಬಂಧರೂಪದಲ್ಲಿ ಉತ್ತರಿಸಬೇಕಾಗುತ್ತದೆ.

ಪ್ರಥಮ ಭಾಷೆ ಪ್ರಶ್ನೆ ಪತ್ರಿಕೆ ೧೨೫ ಅಂಕಗಳಿಗೆ ಹಾಗೂ ದ್ವಿತೀಯ ಭಾಷೆ ಪತ್ರಿಕೆಯಲ್ಲಿ ಶೇ ೩೫ ಅಂಕದ ಪ್ರಶ್ನೆಗಳಿಗೆ ಬಹು ಆಯ್ಕೆಯ ಉತ್ತರಗಳು ಮತ್ತು ಶೇ. ೬೫ ಪ್ರಬಂಧರೂಪದ ಪ್ರಶ್ನೆಗಳಿರುತ್ತವೆ ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕ ಟಿ. ಎಂ. ಕುಮಾರ್ ಹೇಳಿದ್ದಾರೆ.

ಈವರೆಗೂ ವಿಜ್ಞಾನ ವಿಷಯದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ಹಾಗೂ ಜೀವಶಾಸ್ತ್ರ ಎಂದು ಎರಡು ಪರೀಕ್ಷೆಯನ್ನು ಬರೆಯುತ್ತಿದ್ದ ವಿದ್ಯಾರ್ಥಿಗಳ ಒತ್ತಡ ಕಮ್ಮಿಮಾಡಲು ಒಂದೇ ಪರೀಕ್ಷೆ ಸಾಕೆಂದು ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮದನ್ ಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

ಇನ್ನಷ್ಟು

ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್

ಮುಖ್ಯಮಂತ್ರಿಗಳ ಹಳ್ಳಿ ದರ್ಶನ

ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ

ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

ತುಣುಕು ಸುದ್ದಿಗಳು

ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್

ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ

ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com