ಹೈದರಾಬಾದ್-ಕರ್ನಾಟಕ ವಿವೋಚನಾ ದಿನ ಸಂಭ್ರಮ
ಸಿದ್ಧತೆ
ಗುಲ್ಬರ್ಗಾ: ಸೆಪ್ಟೆಂಬರ್ ೧೭ ರಂದು `ಹೈದರಾಬಾದ್-
ಕರ್ನಾಟಕ ವಿವೋಚನಾ ದಿನ
ವನ್ನು ವಿಜೃಂಭಣೆಯಿಂದ ಆಚರಿಸಲು ಗುಲ್ಬರ್ಗಾ ಜಿಲ್ಲಾಡಳಿತ ತೀರ್ಮಾನಿಸಿದೆ.
ಗುಲ್ಬರ್ಗಾ ಜಿಲ್ಲಾ ಉಪ ಆಯುಕ್ತ ಪಂಕಜಕುಮಾರ್
ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಮೋಚನಾ ದಿನ
ಆಚರಣೆಯ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ
ಬಿಜೆಪಿಯ ವಿಧಾನಪರಿಷತ್ತಿನ ಸದಸ್ಯ ಸಶೀಲ್ ನಮೋಶಿ ಸಭೆಯಲ್ಲಿ
ಉಪಸ್ಥಿತರಿದ್ದರು.
ಈಗ ಆಯುಕ್ತರು ನೀಡಿರುವ ನಿರ್ದೇಶನದ ಪ್ರಕಾರ
ಸೆಪ್ಟೆಂಬರ್ ೧೭ ರಂದು ಮಿನಿ ವಿಧಾನಸೌಧದ ಆವರಣದಲ್ಲಿ ಎಲ್ಲಾ
ಕಾರ್ಯಕ್ರಮಗಳು ಜರುಗಲಿದೆ.
ಗಣ್ಯವ್ಯಕ್ತಿಗಳಿಂದ ಮುಂಜಾನೆ ೮ಗಂಟೆಗೆ ಸರ್ದಾರ್
ವಲ್ಲಭಭಾಯಿ ಪಟೇಲ್ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುವುದು.
೯ ಗಂಟೆಗೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು.
ವಿಮೋಚನೆಗಾಗಿ ಹೋರಾಡಿದ ಗಣ್ಯರಿಗೆ ಸನ್ಮಾನ.
ಸಂಜೆ ೫ ಗಂಟೆಗೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ
ಎದುರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಇದಲ್ಲದೆ ಎಲ್ಲಾ ತಾಲ್ಲೂಕು ಕೇಂದ್ರದಲ್ಲೂ `ವಿವೋಚನಾ
ದಿನ ಆಚರಿಸಲು ನಿರ್ದೇಶನ
ನೀಡುವುದಾಗಿ ಉಪ ಆಯುಕ್ತ ಪಾಂಡೆ ಹೇಳಿದ್ದಾರೆ. ಶಾಲೆ ಕಾಲೇಜಿನಲ್ಲಿ
ವಿವೋಚನಾ ಹೋರಾಟಗಾರರಿಂದ ಭಾಷಣವನ್ನು ಏರ್ಪಡಿಸಲಾಗುವುದು,
ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಬೆಳಕಿನಿಂದ ಅಲಂಕರಿಸಲಾಗುವುದು. ಈ ಬಗ್ಗೆ
ಈಗಾಗಲೇ ಗುಲ್ಬರ್ಗಾ ಮಹಾನಗರ ಪಾಲಿಕೆಗೆ ನಿರ್ದೇಶನವನ್ನು ನೀಡಲಾಗಿದೆ
ಎಂದು ಉಪಆಯುಕ್ತ ಪಾಂಡೆ ಹೇಳಿದರು.
ಇನ್ನಷ್ಟು
ಮೈಸೂರು
ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ಭಯೋತ್ಪಾದನಾ
ಧಾಳಿ ಮುನ್ನೆಚ್ಚರಿಕೆ: ಪ್ರಧಾನಿ
ಜಗಜಿತ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಅಮಾನತು
ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರಯಾಣ
ಸೇವೆ
ಗಡಿವಿವಾದ: ಕೇಂದ್ರ ಸರ್ಕಾರದ ವಿರುದ್ಧ
ಧರಣಿ
ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ